BBMP
Loading ...

ಬೆಂಗಳೂರು: ಮಾಜಿ ಪ್ರಧಾನಿ ಪುತ್ರ, ಶಾಸಕ ರೇವಣ್ಣ  ಅವರನ್ನು ಮಹಿಳೆಯ ಕಿಡ್ನ್ಯಾಪ್ ಕೇಸ್‌ನಲ್ಲಿ  ಎಸ್​ಐಟಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಸದ್ಯ ರೇವಣ್ಣ ಅವರು ಸಿಐಡಿ ಕಚೇರಿಯಲ್ಲಿದ್ದು, ಇಂದು ಜಡ್ಜ್ ಮುಂದೆ SIT ತಂಡ ಹಾಜರು ಪಡಿಸಲಿದೆ. ಇಂದು ಕೋರ್ಟ್​ಗೆ ರಜೆ ಇರುವ ಕಾರಣ ರೇವಣ್ಣ ಅವರಿಗೆ ನ್ಯಾಯಾಂಗ ಬಂಧನ ಬಹುತೇಕ ಫಿಕ್ಸ್ ಎನ್ನಲಾಗಿದೆ. ನ್ಯಾಯಾಂಗ ಬಂಧನ ಆದರೆ ರೇವಣ್ಣ ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚಿದೆ.

ಇಂದು ಕೋರ್ಟ್‌ಗೆ ರಜೆ ಕಾರಣ ನಾಳೆ ಎಸ್​ಐಟಿ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಬಾಡಿ ವಾರಂಟ್‌ ಮೂಲಕ ಕಸ್ಟಡಿಗೆ ಪಡೆಯುವ ಅವಕಾಶವಿದೆ. ಈ ವೇಳೆ 2 ಕೇಸ್‌ಗಳ ಸಂಬಂಧ ಎಸ್​ಐಟಿ ವಿಚಾರಣೆ ಮಾಡಲಿದೆ. ಎಡಿಜಿಪಿ ಬಿ.ಕೆ ಸಿಂಗ್ ಹಾಗೂ ತಂಡ ರೇವಣ್ಣ ಅವರ ವಿಚಾರಣೆ ಮಾಡಲಿದ್ದು, ಈಗಾಗಲೇ ಅಧಿಕಾರಿಗಳು ಹಲವು ಮಾಹಿತಿಯನ್ನ ಸಂಗ್ರಹಿಸಿದ್ದಾರಂತೆ.

ರೇವಣ್ಣ ವಿರುದ್ಧ ದಾಖಲಾಗಿರುವ ಕಿಡ್ನಾಪ್ ಸೆಕ್ಷನ್​​ಗಳು ತುಂಬಾನೇ ಸ್ಟ್ರಾಂಗ್​ ಆಗಿವೆ. 364a ಸೆಕ್ಷನ್​ ದಾಖಲಾಗಿದ್ದು, ಇದು ಸಾಬೀತಾದಲ್ಲಿ ಹತ್ತು ವರ್ಷದಿಂದ ಜೀವವಾಧಿ ಶಿಕ್ಷೆ ಆಗ್ಬೋದು. ಇನ್ನು ಸೆಕ್ಷನ್​ 365ರ ಅಡಿಯಲ್ಲಿ ಅಪಹರಣ ಕೇಸ್​ಗೆ ಸಂಬಂಧ ಪಟ್ಟಂತೆ ಮೂರರಿಂದ ಏಳು ವರ್ಷ ಶಿಕ್ಷೆ ಅಥವಾ ದಂಡವನ್ನೂ ವಿಧಿಸ್ಬೋದು.

ಮಹಿಳೆ ಅಪಹರಣದ ಪ್ರಕರಣದಲ್ಲಿ ರೇವಣ್ಣ ಬಂಧನವಾದ ಬೆನ್ನಲ್ಲೇ ಅವರ ಪತ್ನಿ ಭವಾನಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಭವಾನಿ ಕರೆಯುತ್ತೊದ್ದಾರೆಂದು ಸತೀಶ್ ಬಾಬು, ನನ್ನ ತಾಯಿಯನ್ನ ಕರೆದೊಯ್ದಿದ್ದರು ಅಂತಾ ಸಂತ್ರಸ್ತೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *