BBMP
Loading ...

E Khata

Greater Bengaluru News9 : ಬಿ ಟು ಎ ಖಾತಾ (A Khata) ಪರಿವರ್ತನೆ ಅರ್ಜಿ ಸಲ್ಲಿಕೆಗೆ ನಾಳೆ (ಆ.23) ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಇಲ್ಲ ಎಂದು ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ಮಾಹಿತಿ ನೀಡಿದ್ದಾರೆ.

ಎ ಖಾತಾ ಅರ್ಜಿ ಸಲ್ಲಿಕೆ ಕುರಿತು ಮಾತನಾಡಿದ ಅವರು, ಎ ಖಾತಾ ಪರಿವರ್ತನೆಗೆ 70 ಸಾವಿರ ಅರ್ಜಿ ಸಲ್ಲಿಕೆ ಅಷ್ಟೇ ಆಗಿದೆ. ಏಳೂವರೆ ಲಕ್ಷ ಬಿ ಖಾತಾ ಇದ್ದು, ಬರೀ 70 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 20 ಸಾವಿರ ಎ ಖಾತಾ ಅಪ್ರೂವ್ ಮಾಡಲಾಗಿದೆ ಎಂದರು.

ಇನ್ನು ಮಾರ್ಗಸೂಚಿ ದರ 2% ಕಟ್ಟಿ ಎ ಖಾತಾ ಪರಿವರ್ತನೆಗೆ ಅವಕಾಶ ಇತ್ತು. ಭಾನುವಾರ ಒಂದು ದಿನ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಇದೆ. ನಾಳೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಸರ್ಕಾರದ ಡಿಸ್ಕೌಂಟ್ ಆಫರ್ ಮುಕ್ತಾಯವಾಗಲಿದೆ. ಈ ಬಾರಿಯು ಕೂಡ ಬಿ ಟು ಎ ಖಾತಾ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಡಿಮೆ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *