BBMP
Loading ...

New Ministers

ಬೆಂಗಳೂರು: ರಾಜ್ಯ ಸರ್ಕಾರದ 19 ನೂತನ ಸಚಿವರಿಗೆ ಅಧಿಕೃತವಾಗಿ ಸರ್ಕಾರಿ ಕಾರು ಹಂಚಿಕೆ ಮಾಡಲಾಗಿದ್ದು, ಮಂಗಳವಾರದಿಂದಲೇ ತಮಗೆ ನಿಗದಿಪಡಿಸಿದ ವಾಹನದಲ್ಲಿಯೇ ಓಡಾಟ ನಡೆಸುತ್ತಿದ್ದಾರೆ. ಪ್ರಮುಖವಾಗಿ 6 ಸಚಿವರು ಫ್ಯಾನ್ಸಿ ನಂಬರ್‌ ಕಾರು ಪಡೆದಿದ್ದಾರೆ.

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಡಿಪಿಎಆರ್‌) ಸಚಿವರುಗಳು ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಕುಮಾರ ಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ.

6 ಸಚಿವರು ಫ್ಯಾನ್ಸಿ ನಂಬರ್‌ ಮೊರೆ
ಬಹುತೇಕ ಎಲ್ಲಾ ಸಚಿವರ ಕಾರುಗಳ ಸಂಖ್ಯೆಯು ಆಕರ್ಷಕವಾಗಿದ್ದು, ಕೆಲ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಇಷ್ಟವಾದ ಫ್ಯಾನ್ಸಿ ನಂಬರ್ ಕಾರ್‌ ಪಡೆದಿದ್ದಾರೆ. ಚಲುವರಾಯಸ್ವಾಮಿ, ಎಸ್‌ಎಸ್‌ ಮಲ್ಲಿಕಾರ್ಜುನ್ 555 ಸಂಖ್ಯೆ ಆಯ್ಕೆ ಮಾಡಿಕೊಂಡರೆ, ಶಿವರಾಜ್ ತಂಗಡಗಿ 5555, ಶಿವಲಿಂಗೇ ಗೌಡ 111, ಜಮೀರ್ 6666, ಸಂತೋಷ್‌ ಲಾಡ್‌ 666 ನಂಬರ್ ಹೊಂದಿದ ಕಾರು ಪಡೆದಿದ್ದಾರೆ.

Leave a Reply

Your email address will not be published. Required fields are marked *