BBMP
Loading ...

BESCOM

Greater Bengaluru News9 : ಭ್ರಷ್ಟಾಚಾರ, ಲಂಚಬಾಕ ತನಕ್ಕೆ ಬ್ರೇಕ್​ ಬೀಳೋದೆ ಇಲ್ವಾ? ಯಾವುದೇ ಸರ್ಕಾರಿ ಕೆಲಸ ಆಗ್ಬೇಕು ಅಂದ್ರು ಹಣ ಕೊಡಲೇಬೇಕು. ಯಾವುದೇ ಇಲಾಖೆಗೆ ಹೋದ್ರು ಟೇಬಲ್ ಕೆಳಗೆ ಹಣ ಕೊಟ್ರೆನೇ ಕೆಲಸ ಎನ್ನುವಂಥಹ ಸ್ಥಿತಿ ಬಂದಿದ್ದು, ಯಾವುದೇ ಸರ್ಕಾರ ಬಂದ್ರೂ ಇಂಥ ಆರೋಪಗಳು ಸಾಮಾನ್ಯವಾಗಿಬಿಟ್ಟಿದೆ. ಇನ್ನು ಲೋಕಾಯುಕ್ತ ರೇಡ್​ ವೇಳೆ ಭಾರೀ ಲಂಚ ಪಡೆಯುತ್ತಿದ್ದ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ಹೊಸದಾಗಿ ನಿರ್ಮಿಸಲಾದ ಕಟ್ಟಡಕ್ಕೆ ಹೊಸ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಂಗಳೂರು ನಗರದ ಹುಳಿಮಾವು ಬಳಿ ನಡೆದಿದ್ದು, ಲಂಚ ಪಡೆಯುವಾಗಲೇ ಬೆಸ್ಕಾಂ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.

ಬೆಂಗಳೂರು ನಗರ ಹುಳಿಮಾವು ಬೆಸ್ಕಾಂ ಎಇಇ ಹಾಗೂ ಜೆಇ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಇಇ ನಾಗರತ್ನ, ಜೆಇ ಸ್ವಾಮಿ ಲೋಕಾ ಬಲೆಗೆ ಬಿದ್ದ ಎಂಬುವವರು ನಿನ್ನೆ ಸಂಜೆ 1,50,000 ಹಣ ಲಂಚ ಪಡೆಯುತ್ತಿದ್ರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಗುತ್ತಿಗೆದಾರ ಅರ್ಷದ್ ಉಲ್ಲಾ ದೂರಿನ ಆಧಾರದ ಮೇಲೆ ದಾಳಿ ನಡೆದಿದ್ದು, ಲಂಚದ ಹಣ ಪಡೆಯುವಾಗಲೇ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಬೆಸ್ಕಾಂ ಅಧಿಕಾರಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

Leave a Reply

Your email address will not be published. Required fields are marked *