BBMP
Loading ...

BESCOM Aee

Greater Bengaluru News9: ಜನಸಾಮಾನ್ಯರ ರಕ್ತಹೀರುವ ಭ್ರಷ್ಟ ಅಧಿಕಾರಿಗಳ ಅಸಲಿಯತ್ತು ಮತ್ತೊಮ್ಮೆ ಬಯಲಾಗಿದ್ದು, ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಡ ಜನರಿಂದ ಸುಲಿಗೆ ಮಾಡುತ್ತಿದ್ದ ಬೆಸ್ಕಾಂನ ಇಬ್ಬರು ಲಂಚಕೋರ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಕಂಬಿ ಹಿಂದೆ ಹೋಗುವಂತಾಗಿದೆ. ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯ (ಬೆಸ್ಕಾಂ) ಹುಳಿಮಾವಿನ 19ನೇ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ (AEE) ಅಧಿಕಾರ ನಡೆಸುತ್ತಿದ್ದ ಶ್ರೀಮತಿ ನಾಗರತ್ನ ಹಾಗೂ ಕಿರಿಯ ಅಭಿಯಂತರ ಸ್ವಾಮಿ ಡಿ, ತಮ್ಮ ಜವಾಬ್ದಾರಿಯನ್ನು ಮರೆತು ನಡೆಸಿದ ಲಂಚದ ಆಟ ಕೊನೆಗೂ ಬೆತ್ತಲಾಗಿದೆ.

ಜನರ ಸೇವೆ ಮಾಡಬೇಕಾದ ಉನ್ನತ ಸ್ಥಾನದಲ್ಲಿದ್ದುಕೊಂಡು, ಸಾರ್ವಜನಿಕರನ್ನು ಕೇವಲ ಹಣ ಮಾಡುವ ವಸ್ತುವಿನಂತೆ ಕಾಣುತ್ತಿರುವ ಈ ಖದೀಮ ಅಧಿಕಾರಿಗಳು ಹೊಸ ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಬರೋಬ್ಬರಿ 1,50,000 ರೂಪಾಯಿಗಳ ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜನರ ಕಷ್ಟ-ನಷ್ಟಗಳಿಗೆ ಕಿಂಚಿತ್ತೂ ಕರಗದ ಈ ಅಕ್ಷರಶಃ ಸುಲಿಗೆಕೋರರು, ಲಂಚದ ಹಣವನ್ನು ಪಡೆದುಕೊಳ್ಳುವ ವೇಳೆ ಅಕ್ಷರಶಃ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದು ತಾವೇ ತೋಡಿದ ಹೊಂಡದಲ್ಲಿ ತಾವೇ ಬಿದ್ದಂತಾಗಿದೆ.

ಲಂಚದ ಹಸಿವಿನಿಂದ ಕಣ್ಣು ಮುಚ್ಚಿಹೋಗಿದ್ದ ಈ ಭ್ರಷ್ಟ ನೌಕರರ ಕೃತ್ಯವು ಇಲಾಖೆಯ ಮೇಲಿರುವ ಗೌರವವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಜನಸಾಮಾನ್ಯರ ಬೆವರಿನ ಹಣವನ್ನು ಕೊಳ್ಳೆಹೊಡೆಯುವುದನ್ನೇ ಕಸುಬು ಮಾಡಿಕೊಂಡಿರುವ ಇಂತಹ ಲಂಚಾವತಾರಿಗಳಿಗೆ ಕೇವಲ ಅಮಾನತು ಸಾಲದು, ಇಲಾಖೆಯು ಇವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು, ಆಗಲೇ ಇಂತಹ ನಾಲಾಯಕ್ ಅಧಿಕಾರಿಗಳಿಗೆ ಬುದ್ಧಿ ಬರುವುದು.

Leave a Reply

Your email address will not be published. Required fields are marked *