BBMP
Loading ...

GBA

Greater Bengaluru News9 : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಪಾರ್ಕಿಂಗ್ ನೀತಿ-2026 ಜಾರಿಗೆ ಮುಂದಾಗಿದೆ.

ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿರುವ ಜಿಬಿಎ, ಖಾಸಗಿ ಪ್ರದೇಶಗಳನ್ನು ಪಾರ್ಕಿಂಗ್ ತಾಣಗಳಾಗಿ ಬಳಸುವ ಹೊಸ ಯೋಜನೆಯನ್ನು ರೂಪಿಸಿದೆ.

ವಾಣಿಜ್ಯ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳನ್ನು ಮಾಲೀಕರ ಒಪ್ಪಿಗೆಯೊಂದಿಗೆ ಪಾರ್ಕಿಂಗ್ ಸೌಲಭ್ಯಕ್ಕಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದೆ.

ಈ ಯೋಜನೆಯಡಿ ಪಾರ್ಕಿಂಗ್‌ಗೆ ನಿವೇಶನ ನೀಡುವ ಮಾಲೀಕರಿಗೆ 15 ರಿಂದ 35 ವರ್ಷಗಳವರೆಗೆ ತೆರಿಗೆ ವಿನಾಯಿತಿ ನೀಡುವ ಚಿಂತನೆ ಇದೆ. ಅಲ್ಲದೆ ಪೇ ಆ್ಯಂಡ್ ಪಾರ್ಕಿಂಗ್ ಮೂಲಕ ಬರುವ ಆದಾಯದಲ್ಲಿ ಮಾಲೀಕರಿಗೂ ಪಾಲು ನೀಡುವ ಪ್ರಸ್ತಾವವಿದೆ.

ಪಾರ್ಕಿಂಗ್ ನೀತಿ-2026ರ ಪ್ರಮುಖ ಅಂಶಗಳು:

  • ಖಾಸಗಿ ಖಾಲಿ ನಿವೇಶನಗಳಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ
  • ನಿವೇಶನದ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿನಾಯಿತಿ
  • ಪೇ ಆ್ಯಂಡ್ ಪಾರ್ಕಿಂಗ್ ಆದಾಯದಲ್ಲಿ ಮಾಲೀಕರಿಗೆ ಪಾಲು
  • ಪ್ರಮುಖ ರಸ್ತೆಗಳು ಹಾಗೂ ಸಿಗ್ನಲ್‌ಗಳ ಬಳಿ ಪಾರ್ಕಿಂಗ್ ನಿಷೇಧ
    ಆದರೆ ಈ ನೀತಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಖಾಸಗಿ ಆಸ್ತಿ ಹಕ್ಕಿನ ಬಗ್ಗೆ ಕೆಲ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಬಿಎಯ ಅಂತಿಮ ಅಧಿಸೂಚನೆ ಬಳಿಕ ಎಷ್ಟು ಮಂದಿ ತಮ್ಮ ನಿವೇಶನಗಳನ್ನು ಪಾರ್ಕಿಂಗ್‌ಗಾಗಿ ನೀಡುತ್ತಾರೆ ಎಂಬುದು ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *