BBMP
Loading ...

FotoJet

Greater Bengaluru News9 : ಬಳ್ಳಾರಿಯಲ್ಲಿ ಲೋಕಾಯುಕ್ತ ಬಲೆಗೆ ಇಬ್ಬರು ಇಂಜಿನಿಯರ್ ಗಳು ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ನೀರು ಮತ್ತು ಒಳಚರಂಡಿ ಎಸ್ಟಿಮೇಟ್ ಗಾಗಿ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 75,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಶೋಕ ಹಾಗೂ ಕಾಶಿನಾಥ್ ಮುಂಗಡವಾಗಿ 55,000 ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಯಮದ ಇಂಜಿನಿಯರ್ ಗಳಾದ ಅಶೋಕ್ ಹಾಗೂ ಕಾಶಿನಾಥ್ ಅವರನ್ನು ಇದೀಗ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ, ವೀರೇಶ್ ಎಂಬವರಿಂದ ಇವರು ಲಂಚ ಸ್ವೀಕರಿಸುತ್ತಿದ್ದರು 2.47 ಎಕರೆಗೆ ಖಾಸಗಿ ಲೇಔಟ್ಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೀರು ಮತ್ತು ಒಳಚರಂಡಿಯ ಎಸ್ಟಿಮೇಟ್ಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 55,000 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *