BBMP
Loading ...

footpath

Greater Bengaluru News9: ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದಾದ್ಯಂತ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಇಂದಿನಿಂದ ಫುಟ್ ಪಾತ್ ಒತ್ತುವರಿ ತೆರವು ಕಾರ್ಯ ಶುರುವಾಗಿದ್ದು, ಕೇಂದ್ರ ಪಾಲಿಕೆಯ 16 ಕಡೆ ಒತ್ತುವರಿ ತೆರವಿಗೆ ಮಾರ್ಕ್ ಮಾಡಲಾಗಿದೆ. ಮೆಜೆಸ್ಟಿಕ್​, ಶಿವಾಜಿನಗರ , ಗಾಂಧಿನಗರದ, ಚಿಕ್ಕಪೇಟೆಯ ಚಾಮರಾಜಪೇಟೆ ಸೇರಿದಂತೆ ಹಲವು ಕಡೆ ಒತ್ತುವರಿ ತೆರವಿಗೆ ಮುಂದಾಗಿದೆ.

ಮೆಜೆಸ್ಟಿಕ್​ನಲ್ಲಿ ಅನೇಕ ವ್ಯಾಪಾರಿಗಳು ಫುಟ್​​ಪಾತ್​ಗಳನ್ನೇ ಅವಲಂಬಿಸಿದ್ದಾರೆ. ಇದೀಗ ಜಿಬಿಎ ದಿಢೀರ್ ಅಂತ ಫುಟ್​ ಪಾತ್ ತೆರವು ಕಾರ್ಯ ನಡೆಸಿದ್ದು, ಇದಕ್ಕೆ ವ್ಯಾಪಾರಿಗಳು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಅಂಗಡಿ ಧ್ವಂಸ ಮಾಡಿದ್ರೆ ಇಲ್ಲೇ ಸೀಮೆ ಎಣ್ಣೆ ಹಾಕಿಕೊಂಡ ಸುಟ್ಟು ಕೊಳ್ಳುತ್ತೇವೆ ಎಂದು ಅಂಗಡಿ ಮಾಲೀಕರು ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ವ್ಯಾಪಾರಿಗಳು, ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹೀಗೆ ಆಗಿಲ್ಲ. ಯಡಿಯೂರಪ್ಪ ಸರ್ಕಾರ ಇದ್ದಾಗಲೂ ಹೀಗೆ ಆಗಿಲ್ಲ. ಈಗ ಯಾಕೆ ಈ ತೆರವು ನಮಗೆ ದಾರಿ ದೋಚುತ್ತಿಲ್ಲ. ಅಂಗಡಿ ಇಲ್ಲ ಅಂದ್ರೆ ಬದುಕೋದು ಕಷ್ಟ, ಮಕ್ಕಳ ಶಾಲೆ ಫೀಸ್ ಕಟ್ಟೋದು ಹೇಗೆ? ಅಂತ ಬೀದಿ ಬದಿ ವ್ಯಾಪಾರಿಗಳು ಕಣ್ಣಿರು ಹಾಕಿದ್ದಾರೆ.

ಮೆಜೆಸ್ಟಿಕ್ ನಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಸಿಬ್ಬಂದಿಗೆ ಹಿಡಿಶಾಪ ಹಾಕಿದ್ದಾರೆ. ನಮಗೊಂದು ದಾರಿ ಮಾಡಿ ಕೊಡಿ. 40 ವರ್ಷದಿಂದ ಅಂಗಡಿ ಹಾಕಿ ಕೊಂಡಿದ್ದೇವೆ. ಈಗ ದಿಢೀರ್ ತೆಗೆಸಿದ್ರೆ ನಾವೆಲ್ಲಿ ಹೋಗೋದು? ಇಲ್ಲೇ ಸೀಮೆ ಎಣ್ಣೆ ಹಾಕಿಕೊಂಡು ಸಾಯ್ತೀವಿ ಎಂದು ಗೋಳಾಡಿದ್ದಾರೆ.

ಫುಟ್ ಪಾತ್​ ತೆರವು, ಬೋರ್ಡ್​​ಗಳನ್ನ ಕಿತ್ತು ಎಸೆದ ಜೆಸಿಬಿ
ಇಂದು ಬೆಳ್ಳಂ ಬೆಳಗ್ಗೆಯೇ ನಗರದಲ್ಲಿ ಜೆಸಿಬಿ ಘರ್ಜಿಸಿದೆ, ಅಶೋಕ ಪಿಲ್ಲರ್ ಬಳಿ ಪುಟ್ಪಾತ್ ಒತ್ತುವರಿ ತೆರವು ಕಾರ್ಯ ಮಾಡಿದ್ದು, ಫೀಟ್ ಪಾತ್ ಗಳ ಮೇಲಿದ್ದ ಅಂಗಡಿಗಳು, ಬೋರ್ಡ್ ಗಳನ್ನ ಜಿಬಿಎ ತೆರವು ಮಾಡುತ್ತಿದೆ. ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯ ಭರದಿಂದ ಸಾಗಿದೆ. ಕೆಲ ಹೋಟೆಲ್​ಗಳು ಫುಟ್ ಪಾತ್​ಗಳನ್ನೇ ಗ್ರಾಹಕರಿಗೆ ಕುಳಿತು ಕೊಳ್ಳಲು ವ್ಯವಸ್ಥೆ ಮಾಡಿದ್ವು. ಅದೆಲ್ಲವನ್ನ ಕೂಡ ಪಾಲಿಕೆ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆದಿದೆ.

  • ಟ್ರಿನಿಟಿ ಜಂಕ್ಷನ್ ನಿಂದ ಎಂಜಿ ರಸ್ತೆ, ಎಂಜಿ ಉದ್ಯಾನದ ವರೆಗೆ
  • 100 ಅಡಿ ಇಂದಿರಾನಗರದಿಂದ ದೊಮ್ಮಲೂರು ಫ್ಲೈಓವರ್
  • ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನಗನಹಳ್ಳಿ ರೈಲ್ವೇ ಸೇತುವೆ ವರೆಗೆ
  • ಅಶೋಕ್ ಪಿಲ್ಲರ್ ಇಂದ ಮಾದಚನ್ ಪಾರ್ಕ್
  • 8ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರ
  • 9ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರ
  • ಆರ್. ವಿ ರಸ್ತೆ ಟೀಚರ್ಸ್ ಕಾಲೇಕಿನಿಂದ ಸೌತ್ ಎಂಡ್ ಸರ್ಕಲ್ ವರೆಗೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ನ್ಯೂಸ್​18 ಜೊತೆ ಮಾತಾಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಅವರು, ಈ ಹಿಂದೆಯೇ ಮಾಹಿತಿ ಕೊಟ್ಟಿದ್ದೇವೆ. ಸ್ವಯಂ ತೆರವು ಮಾಡದ ಅಂಗಡಿಗಳನ್ನು ಇದೀಗ ನಾವೇ ತೆರವು ಮಾಡುತ್ತಿದ್ದೇವೆ. ನಾಳೆಯಿಂದ ತೆರವು ಮಾಡಿದ ಜಾಗದಲ್ಲಿ ಮತ್ತೆ ಅಂಗಡಿಗಳ ಹಾಕಿಕೊಳ್ಳುವ ಹಾಗಿಲ್ಲ.

ಒಂದೊಮ್ಮೆ ಮತ್ತೆ ಒತ್ತುವರಿ ಮಾಡಿದ್ರೆ 50 ಸಾವಿರದವರೆಗೂ ಫೈನ್ ಹಾಕಲು ಅವಕಾಶ ಇದೆ. ನಾಳೆಯಿಂದ ದಂಡಾಸ್ತ್ರವನ್ನು ಪ್ರಯೋಗ ಮಾಡ್ತೀವಿ. ಮಾರ್ಷಲ್ ಗಳು ನಮ್ಮ ಪಾಲಿಕೆ ಸಿಬ್ಬಂದಿಗಳು ನಾಳೆಯಿಂದ ರೌಂಡ್ಸ್ ಹಾಕ್ತಾರೆ. ಒಂದು ವೇಳೆ ಮತ್ತೆ ಒತ್ತುವರಿ ಮಾಡಿದ್ರೆ ಫೈನ್ ಫಿಕ್ಸ್ ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ರು.

Leave a Reply

Your email address will not be published. Required fields are marked *