Greater Bengaluru News9 : ವೃದ್ಧೆಯೊಬ್ಬರು ಮೃತಪಟ್ಟ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರದ ಬಳಿ ಕೋತಿಯೊಂದು ಕುಳಿತು ಕಣ್ಣೀರು ಸುರಿಸಿರುವ ಹೃದಯ ವಿದ್ರಾವಕ ಘಟನೆ ರಾಮನಗರದಲ್ಲಿ ನಡೆದಿದೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಅದೀಗ ಎಲ್ಲೆಡೆ ವೈರಲ್ (Viral video) ಆಗಿದೆ.
ರಾಮನಗರದ ರಾಯರದೊಡ್ಡಿಯಲ್ಲಿ ಪಾರ್ವತಮ್ಮ (80) ಎಂಬ ವೃದ್ಧೆ ನಿಧರಾದಾಗ ಈ ಘಟನೆ ನಡೆದಿದೆ. ಮೂಲತಃ ಚನ್ನಪಟ್ಟಣದ ಬಿ.ವಿ. ಹಳ್ಳಿಯವರಾದ ಪಾರ್ವತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಪ್ರತಿದಿನ ಮನೆಯ ಬಳಿ ಬರುತ್ತಿದ್ದ ಕೋತಿಗೆ ಪಾರ್ವತಮ್ಮ ಪ್ರೀತಿಯಿಂದ ತಿನಿಸು ತಿಂಡಿ ನೀಡುತ್ತಿದ್ದರು. ಇಬ್ಬರ ನಡುವೆ ಬಾಂಧವ್ಯವೊಂದು ಬೆಳೆದಿತ್ತು.
ಮಾ. 31 ರ ಮಂಗಳವಾರ ಪಾರ್ವತಮ್ಮ ವಯೋಸಹಜವಾಗಿ ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕೋತಿಯು ಅಲ್ಲಿದ್ದ ಜನರು ಅಚ್ಚರಿಗೀಡಾಗುವಂತೆ ವರ್ತಿಸಿದ್ದು, ಶವದ ಮುಖದ ಬಳಿ ಮುಖವಿಟ್ಟು ಕಣ್ಣೀರು ಸುರಿಸಿದು. ಭಾವನೆಗಳು, ಶೋಕ ಸಂತಾಪಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಇದೆ ಎಂದು ಕೋತಿ ಸಾಬೀತುಪಡಿಸಿದ್ದು ಅಲ್ಲಿದ್ದವರನ್ನು ವಿಸ್ಮಿತಗೊಳಿಸಿದೆ.
ಅಜ್ಜಿಯ ಅಗಲಿಕೆಗೆ ಕಣ್ಣೀರು ಸುರಿಸಿದ ಕೋತಿ-
ಇದು ಯಾವ ಜನ್ಮದ ಅನುಬಂಧ!#grandmother #passing #Monkey #tears #Ramanagar #Kannadanews #navasamajanews pic.twitter.com/KE5FAOuwS7— navasamaja (@navasamajanews) April 1, 2026


