BBMP
Loading ...

Madhu Bangarappa 1

Greater Bengaluru News9 : ಬೆಂಗಳೂರು: SSLC ಪರೀಕ್ಷೆಯ ಅಂಕಗಳನ್ನು 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ಕೊಕ್ ನೀಡಲಾಗಿದ್ದು ಹಿಂದಿನ‌ ವರ್ಷಗಳಂತೆ ಅವರು 100 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದು, ಅಂಕಪಟ್ಟಿಯಲ್ಲಿ ಗ್ರೇಡ್ ಅಂತ ನಮೂದಿಸಲಾಗುತ್ತದೆ.

ಬೆಂಗಳೂರಿನಲ್ಲಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ, ಮಧು ಬಂಗಾರಪ್ಪ, ಈ ನಿಯಮ 2026ರಲ್ಲಿ ನಡೆಯುತ್ತಿರುವ ಎಸ್ಎಸ್ಎಲ್‌ಸಿ ಪರೀಕ್ಷೆಯಿಂದಲೇ ಅನ್ವಯವಾಗಲಿದೆ ಎಂದರು.

ಈ ಹಿಂದೆ 625 ಅಂಕಗಳಿಗೆ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈಗ ಅಂಕಪಟ್ಟಿಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಯ 100 ಅಂಕಗಳನ್ನು ಅಂಕಪಟ್ಟಿಯಲ್ಲಿ ನಮೂದಿಸುವುದಿಲ್ಲ. 525 ಅಂಕಗಳಿಗೆ ಪ್ರತಿ ವಿದ್ಯಾರ್ಥಿಯೂ ಪಡೆದ ಅಂಕಗಳಷ್ಟೇ ಇರುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *