BBMP
Loading ...

Kala Vahini

Greater Bengaluru News9 : ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಯುಗಾದಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಅಪ್ಪು ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಮಾರ್ಚ್ 15ರ ಭಾನುವಾರದಂದು ರಾಮಮೂರ್ತಿ ನಗರದ ನಾಟ್ಯ ಪ್ರಿಯ ಆಡಿಟೋರಿಯಂ ನಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9:00ವರೆಗೆ ನಿರಂತರವಾಗಿ ಅದ್ದೂರಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಲನಚಿತ್ರ ನಟರಾದ ನೆನಪಿರಲಿ ಪ್ರೇಮ್ ರವರು ಭಾಗಿಯಾಗಿದ್ದು ವಿಶೇಷ.

ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದ ಸ್ವಾಮಿ ಅವರು ವಹಿಸಿಕೊಂಡಿದ್ದರು.

ಹಿರಿಯ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ಅವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ವಿ ಭರಣಿ ರಾಜು, ಸ್ಕ್ವಯರ್ ಫೀಟ್ ರಿಯಾಲಿಟಿ ಸಂಸ್ಥೆಯ ಸಂಸ್ಥಾಪಕರಾದ ಡಾಕ್ಟರ್ ನಾರಾಯಣ ಪ್ರಸಾದ್ ಅವರು, ಶ್ರೀ ಸಾಯಿ ಶಂಕರ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥಾಪಕರಾದ ದೀಪಾ ಲಕ್ಷ್ಮಿಯವರು, ರಾಜ್ ಡಾನ್ಸ್ ಅಕಾಡೆಮಿ ಸಂಸ್ಥಾಪಕರಾದ ಲಿಖಿತ್ ಅವರು ವಹಿಸಿಕೊಂಡಿದ್ದರು. ಎಲ್ಲರೂ ಜೊತೆಗೂಡಿ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.. ಕಾರ್ಯಕ್ರಮದಲ್ಲಿ ಹಲವು ಪ್ರತಿಭೆಗಳನ್ನ ಗುರುತಿಸಿ ಸನ್ಮಾನಿಸಲಾಯಿತು.

ಇನ್ನು ದ್ವಿತೀಯಾರ್ಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾರುತಿ ಮೆಡಿಕಲ್ಸ್ ಮಾಲೀಕರಾದ ಮಹೇಂದ್ರ ಮುನ್ನತ್ ಅವರು, ರಾಮಮೂರ್ತಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿಜೆ, ಹಾವನೂರು ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ ಲಲಿತಾ ಎಂ, ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿ ಡಿಸೈನರ್ ಮತ್ತು ಸ್ಟೈಲಿಸ್ಟ್ ಶ್ರೀಮತಿ ಲಕ್ಷ್ಮಿ ಕೃಷ್ಣ, ಚಲನಚಿತ್ರ ನಟರಾದ ಅವಿನಾಶ್ , ಕನ್ನಡ ಬ್ಯಾಚುಲರ್ಸ್ ಸಂಸ್ಥಾಪಕರಾದ ಶ್ರೀಧರ ಮಹಿಪತಿ ಗೌಡ ಹಾಗೂ ಇವೆಂಟ್ ಕೋ ಆರ್ಡಿನೇಟರ್ ಶ್ರೀಮತಿ ಚಂದ್ರಿಕಾ ಭಾಗವಹಿಸಿದ್ದರು.. ಎಲ್ಲರೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ 35ಕ್ಕೂ ಹೆಚ್ಚು ಮಕ್ಕಳು ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮದಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ಸಾಮಾಜಿಕ ಸಂದೇಶವನ್ನ ಸಾರಿದ್ದು ಆಕರ್ಷಣೀಯವಾಗಿತ್ತು. ಮಕ್ಕಳಿಗಾಗಿ ವಿಶೇಷ ಮ್ಯಾಜಿಕ್ ಶೋ ಆಯೋಜನೆ ಮಾಡಲಾಗಿತ್ತು.

ಇನ್ನು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷ. ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು.

Leave a Reply

Your email address will not be published. Required fields are marked *