BBMP
Loading ...

BESCOM

Greater Bengaluru News9: ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿಗೆ ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯಡಿ ಬೆವಿಕಂ ನಿಯಮಗಳನ್ನು ಉಲಂಘಿಸಿ ನಿಯಮವಾಹಿರವಾಗಿ 09 ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕಂಪನಿಗೆ ಆರ್ಥಿಕ ನಷ್ಟ ಉಂಟುಮಾಡಿದ ರಾಮನಗರ ಗ್ರಾಮಾಂತರ ಉಪ ವಿಭಾಗದ ಕಿರಿಯ ಇಂಜಿನಿಯರ್​ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕಾಶ್​ ಅಕ್ರಮದ ಬಗ್ಗೆ ಗ್ರೇಟರ್​ ಬೆಂಗಳೂರು ನ್ಯೂಸ್​ 9 ವರದಿ ಮಾಡಿತ್ತು, ಇದರ ಬೆನ್ನಲ್ಲೆ ತನಿಖೆ ನಡೆಸಿ, ಅಕ್ರಮ ಸಾಬೀತಾದ ಬೆನ್ನಲ್ಲೇ ಅಧಿಕಾರಿಗಳನ್ನು ಸಸ್ಪೆಂಡ್​ ಮಾಡಲಾಗಿದೆ.

ಪ್ರಕಾಶ್ ಅವರು ಬೆಸ್ಕಾಂ ಕಂಪನಿಯ ಸುಮಾರು 9 ವಿದ್ಯುತ್​ ಕಂಬಗಳನ್ನು ಹಾಕಿ, ಒಂದು ಎಸ್​ಎಸ್​ಪಿ ಅಥವಾ ಬೋರ್​ವೆಲ್​ ಕನೆಕ್ಷನ್​ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ, ಶೀಘ್ರ ಸಂಪರ್ಕ ಯೋಜನೆಗೆ ಸುಮಾರು 100 ಮೀಟರ್​ಗಳ ಅಂತರ ಇರಬೇಕು. ಎರಡು ಬೋರ್​ವೆಲ್​ಗಳು ಇರಬೇಕು ಹಾಗೂ ಪ್ರತ್ಯೇಕ ಓನರ್​ಗಳು ಇರಬೇಕು ಮತ್ತು ಎರಡು ಸರ್ವೆ ನಂಬರ್​ಗಳು ಇರಬೇಕು. ಆದರೆ, ಇಲ್ಲಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಒಂದೇ ಓನರ್​ ಇರುವಂತಹ ಕೃಷಿ ಜಮೀನಿಗೆ ಹಿಂದಕ್ಕೆ ಮೂರು ಹಾಗೂ ಮುಂದಕ್ಕೆ ಮೂರು ಕಂಬಗಳನ್ನು ಹಾಗೂ ಎರಡು ಕಂಬಗಳನ್ನು ಹಾಕಿ, ಒಂದು ಸ್ಟ್ರಕ್ಚರ್​ ಮಾಡಿ, ಅದಕ್ಕೊಂದು ಟ್ರಾನ್ಸ್​ಫಾರ್ಮರ್​ ಹಾಕಿದ್ದಾರೆ. ಇದೆಲ್ಲವನ್ನು ಸ್ವಯಂ ಕಾರ್ಯ ಯೋಜನೆ ಅಡಿ ಮಾಡಬೇಕಿತ್ತು. ಆದರೆ, ಬೆಸ್ಕಾಂ ಕಂಪನಿಯ ವಿದ್ಯುತ್​ ಕಂಬಗಳು ಹಾಗೂ ವೈರ್​ಗಳನ್ನು ಬಳಸಿ, ಈ ಕಾಮಗಾರಿ ಮಾಡಲಾಗಿದೆ.

ಎಸ್​ಎಸ್​ಪಿ ಕಾಮಗಾರಿ ಮಾಡಿಸುವಾಗ ಕಂಬ, ವೈರ್​ ಹಾಗೂ ಕೂಲಿ ಕಾರ್ಮಿಕರನ್ನು ಸ್ವತಃ ಅರೇಂಜ್​ ಮಾಡಬೇಕು. ಹಣ ಕಟ್ಟಿದ ಮೇಲೆ ಟ್ರಾನ್ಸ್​ಫಾರ್ಮ್​ ಕೊಡುತ್ತಾರೆ. ಈ ರೀತಿ ಕೊಡುವಾಗ ಎರಡು ಓನರ್​, ಎರಡು ಸರ್ವೇ ನಂಬರ್​ ಇರಬೇಕು. ಆದರೆ, ಒಬ್ಬರಿಗೆ ನೀಡಿದ್ದರಿಂದ ಅಕ್ರಮದ ವಾಸನೆ ಮೂಗಿಗೆ ಬಡಿದಿತ್ತು. ಅಂತಿಮವಾಗಿ ಅಧಿಕಾರಿಯನ್ನು ಸಸ್ಪೆಂಡ್​ ಮಾಡಲಾಗಿದೆ.

Leave a Reply

Your email address will not be published. Required fields are marked *