BBMP
Loading ...

BBMP Wastage

Greater Bengaluru news9: ನಗರದಲ್ಲಿ ಸಂಚಾರ ಸಮಸ್ಯೆ ಒಂದು ಕಡೆಯಾದರೆ ಕಸದ ನಿರ್ವಹಣೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಒಂದು ದಿನ ಮನೆಯಿಂದ ಕಸ ತೆರವು ಮಾಡದೇ ಇದ್ದರೆ ಮನೆ, ಬೀದಿ ಎಲ್ಲಾ ಗಬ್ಬು ನಾರುತ್ತದೆ. ಅಲ್ಲದೆ ಕೆಲವು ದಿನಗಳ ಹಿಂದೆ ಬೆಂಗಳೂರು ಕಸವನ್ನು ತಂದು ಇಲ್ಲಿ ಹಾಕಬೇಡಿ ಎಂದು ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ ಜನರು ಆಗ್ರಹ ಮಾಡಿದ್ದರು.

ಹೌದು, ನಗರದಲ್ಲಿ ಕಸ ನಿರ್ವಹಣೆಗೆ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಾಗ್ಯೂ ಮುಂಜಾನೆ ಆದರೆ ಸಾಕು ವಿವಿಧ ರಸ್ತೆ ಮೂಲೆಗಳಲ್ಲಿ ಕಸದ ರಾಶಿ ನಿರ್ಮಾಣ ಆಗಿ ಬಿಡುತ್ತವೆ. ಇದೇ ರೀತಿ ನೀವು ಕಸವನ್ನು ಕದ್ದು ಇಲ್ಲಿ ಹಾಕುತ್ತಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ. ಯಾಕೆಂದರೆ ಈವರೆಗೆ ಅಧಿಕಾರಿಗಳು 3.6 ಕೋಟಿ ರೂ ದಂಡ ವಸೂಲಿ (Fine collection)ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. 82 ಸಾವಿರ ಪ್ರಕರಣಗಳಲ್ಲಿ ಒಟ್ಟಾರೆ 3.6 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ದಂಡ ಹಾಕುವ ಜೊತೆಗೆ ಸ್ವಚ್ಛತೆಯ ಪಾಠವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇನ್ನು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಹಾಗೂ ಉಗುಳುವುದು ಸೇರಿದಂತೆ ವಿವಿಧ ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ.

ಮೂಲೆ ಮೂಲೆಯಲ್ಲಿ ಸಿಸಿಟಿವಿ ಹಾಕಿರುವ ಕಾರಣಕ್ಕೆ ಯಾರು ಕಸತಂದು ರಸ್ತಬದಿಯಲ್ಲಿ ಬಿಸಾಕುತ್ತಾರೆ ಅನ್ನೋದು ಅಧಿಕಾರಿಗಳಿಗೆ ಸುಲಭವಾಗಿ ತಿಳಿಯುತ್ತಿದೆ. ಇದರಿಂದ ಅವರ ಮನೆಗೆ ಹೋಗಿ ಕಸವನ್ನು ಹಾಕಿ ಅವರಿಗೆ ಸ್ವಚ್ಛತೆಯ ಪಾಠ ಮಾಡಿ ಬರುತ್ತಿದ್ದಾರೆ. ಇದರೊಂದಿಗೆ ಸಾರ್ವಜನರಿಕರು ಸಹ ಸಹಾಯವಾಣಿ ಮೂಲಕ ಕರೆ ಮಾಡಿ ದೂರು ನೀಡುತ್ತಾರೆ. ಈ ದೂರು ಆಧರಿಸಿ ದಂಡ ವಿಧಿಸಲಾಗುತ್ತಿದೆ.

ಈವರೆಗೆ ವಸೂಲಿ ಮಾಡಿದ ದಂಡದ ವಿವರ
ಆಗಸ್ಟ್‌ 2025 ರಂದು ಒಟ್ಟು 6,168 ಪ್ರಕರಣಗಳಲ್ಲಿ 25.1 ಲಕ್ಷ ರೂ ದಂಡ ವಿಧಿಸಲಾಗಿದೆ. ನಂತರ ಅಂದರೆ ಸೆಪ್ಟೆಂಬರ್‌ 2025 ರಂದು 21,257 ಪ್ರಕರಣ ದಾಖಲಾಗಿದ್ದು, 98 ಲಕ್ಷ ರೂ. ದಂಡ ಪಡೆಯಲಾಗಿದೆ. ಹಾಗೆಯೇ ಅಕ್ಟೋಬರ್‌ 2025 ರಂದು 12,625 ದೂರು ಬಂದಿದ್ದು, 56 ಲಕ್ಷ ರೂ. ದಂಡ, ನವೆಂಬರ್‌ 2025ನಲ್ಲಿ 14,337 ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, 61.8 ಲಕ್ಷ ರೂ ದಂಡ, ಡಿಸೆಂಬರ್‌ 2025 ರಂದು 13,095 ಪ್ರಕರಣಕ್ಕೆ 56.5 ಲಕ್ಷ ರೂ. ದಂಡ, ಜನವರಿ 2026 ಕ್ಕೆ 15,011 ಪ್ರಕರಣ ದಾಖಲಾಗಿದ್ದು, 66 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.


ಎಷ್ಟು ದಂಡ ವಿಧಿಸಲಾಗುತ್ತದೆ?
ರಸ್ತೆ ಬದಿ ಕಸ ಹಾಕಿ ಹೋಗುವವರಿಗೆ ಇದೀಗ 2 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಈ ದುಬಾರಿ ದಂಡ ದಿಂದಾಗಿ ಸಾಕಷ್ಟು ಜನರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಮೂತ್ರ ವಿಸರ್ಜನೆ ಕುರಿತು 308 ಪ್ರಕರಣ, ರಸ್ತೆ ಬದಿ ಉಗಿದ 183 ಪ್ರಕರಣಳಿಂದ ಒಟ್ಟಾರೆ 45,100 ರೂ. ದಂಡ ವಸೂಲಿ ಮಾಡಲಾಗಿದೆ.


ಬೆಂಗಳೂರಲ್ಲಿ ಕಸದ ಸಮಸ್ಯೆ
ಬೆಲ್ಲಹಳ್ಳಿ, ಮಿಟ್ಟಗಾನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯ ಡಂಪಿಂಗ್ ಯಾರ್ಡ್‌ಗಳಿಗೆ ಕಸ ಹೊತ್ತೊಯ್ಯುವ ಲಾರಿಗಳನ್ನು ಫೆಬ್ರವರಿ ಮಧ್ಯಭಾಗದಲ್ಲಿ ಸ್ಥಳೀಯ ಗ್ರಾಮಸ್ಥರು ತಡೆದಿದ್ದರು. ಕಳೆದ ಎರಡು ವರ್ಷಗಳಿಂದ ಈ ಗ್ರಾಮಗಳ ಅಭಿವೃದ್ಧಿಗೆ ಬರಬೇಕಿದ್ದ ಅನುದಾನ ಬಿಡುಗಡೆಯಾಗಿಲ್ಲ ಮತ್ತು ನಿರಂತರ ಕಸ ವಿಲೇವಾರಿಯಿಂದ ರಸ್ತೆಗಳು ಹಾಳಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಗ್ರಾಮಸ್ಥರ ದೂರಾಗಿತ್ತು. ಫೆಬ್ರವರಿ 19ರ ಸುಮಾರಿಗೆ ಸರ್ಕಾರವು ಸುಮಾರು ₹550 ಕೋಟಿಗಳ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ ನಂತರ ಬೆಲ್ಲಹಳ್ಳಿ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

Leave a Reply

Your email address will not be published. Required fields are marked *