BBMP
Loading ...

BESCOM

Greater Bengaluru News9: ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟೋದು ಸುಲಭದ ಮಾತಲ್ಲ. ಸಾಲ ಸೋಲ ಮಾಡಿ ಮನೆ ಕಟ್ಟಿರ್ತೀರಾ, ಆದರೆ ಈಗ ಬೆಸ್ಕಾಂ (BESCOM) ಹೊಸದೊಂದು ಶಾಕ್ ನೀಡಿದೆ. ನಿಮ್ಮ ಹತ್ತಿರ ‘ಒಸಿ’ (Occupancy Certificate) ಅಥವಾ ಸ್ವಾಧೀನಾನುಭವ ಪತ್ರ ಇಲ್ಲಾಂದ್ರೆ, ನಿಮ್ಮ ಮನೆಯ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗುತ್ತಿದೆ.

ಏನಿದು ಹೊಸ ರೂಲ್ಸ್?
ಸರ್ಕಾರದ ಆದೇಶದ ಪ್ರಕಾರ ಏಪ್ರಿಲ್ ತಿಂಗಳಿನಿಂದಲೇ ‘ಒಸಿ’ (OC) ಕಡ್ಡಾಯ ಮಾಡಲಾಗಿದೆ. ಆದರೆ ತುಂಬಾ ಜನ ಮನೆ ಕಟ್ಟುವಾಗ ತಗೊಳ್ತಿದ್ದ ‘ತಾತ್ಕಾಲಿಕ ಕರೆಂಟ್’ (Temporary Connection) ಇಟ್ಟುಕೊಂಡೇ ವಾಸ ಶುರು ಮಾಡಿದ್ದಾರೆ. ಇದು ಬೆಸ್ಕಾಂ ಗಮನಕ್ಕೆ ಬಂದಿದ್ದು, ಈಗ ಆಪರೇಷನ್ ಶುರು ಮಾಡಿದ್ದಾರೆ.

ಇದು ಸ್ವಲ್ಪ ಆಶ್ಚರ್ಯ ಆದ್ರೂ ಸತ್ಯ. ಜುಲೈ ತಿಂಗಳ ನಂತರ ಬೆಸ್ಕಾಂ ಸಹಾಯವಾಣಿಗೆ ಸಿಕ್ಕಾಪಟ್ಟೆ ಕರೆಗಳು ಬರ್ತಿವೆ. ಯಾರು ಅಕ್ರಮವಾಗಿ ಕರೆಂಟ್ ಎಳ್ಕೊಂಡಿದ್ದಾರೆ ಅಂತ ಅಕ್ಕಪಕ್ಕದವರೇ (Neighbors) ಫೋನ್ ಮಾಡಿ ಕಂಪ್ಲೇಂಟ್ ಕೊಡ್ತಿದ್ದಾರೆ.

ದಿನ ಬಿಟ್ಟು ದಿನ ರೇಡ್ (Raid)!
ಬೆಸ್ಕಾಂ ಅಧಿಕಾರಿಗಳು ಸುಮ್ಮನೆ ಕೂತಿಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ಫೀಲ್ಡ್‌ಗೆ ಇಳಿದು ತಪಾಸಣೆ ಮಾಡ್ತಿದ್ದಾರೆ. ತಾತ್ಕಾಲಿಕ ಲೈನ್ ಇಟ್ಕೊಂಡು ಪರ್ಮನೆಂಟ್ ಆಗಿ ಯಾರು ಲೈಟ್, ಫ್ಯಾನ್ ಬಳಸ್ತಿದ್ದಾರೆ ಅವರ ಲೈನ್ ಕಟ್ ಮಾಡ್ತಿದ್ದಾರೆ.

ಮನೆ ಕಟ್ಟಿಸುವಾಗ ಕಂಟ್ರಾಕ್ಟರ್‌ಗಳು ‘ತಾತ್ಕಾಲಿಕ ಮೀಟರ್ ಇದೆ, ಅದ್ರಲ್ಲೇ ಅಡ್ಜಸ್ಟ್ ಮಾಡ್ಕೊಳ್ಳಿ, ಆಮೇಲೆ ನೋಡೋಣ’ ಅಂತ ಹೇಳ್ತಾರೆ. ದಯವಿಟ್ಟು ನಂಬಬೇಡಿ. ತಾತ್ಕಾಲಿಕ ಮೀಟರ್ ಇರೋದು ಮನೆ ಕಟ್ಟೋಕೆ ಮಾತ್ರ, ವಾಸ ಮಾಡೋಕೆ ಅಲ್ಲ. ಅದಕ್ಕೆ ಕಮರ್ಷಿಯಲ್ ರೇಟ್ (Commercial Rate) ಇರುತ್ತೆ, ಬಿಲ್ ಜಾಸ್ತಿ ಬರುತ್ತೆ ಮತ್ತು ಬೆಸ್ಕಾಂ ಅವರು ಫೈನ್ ಕೂಡ ಹಾಕ್ತಾರೆ. ಮನೆಗೆ ಗ್ರಹಪ್ರವೇಶ ಮಾಡೋ ಮುಂಚೆ Permanent Meterಗೆ ಅಪ್ಲೈ ಮಾಡಿ.”ಮನೆ ಕಟ್ಟಿಸುವಾಗ ಕಂಟ್ರಾಕ್ಟರ್‌ಗಳು ‘ತಾತ್ಕಾಲಿಕ ಮೀಟರ್ ಇದೆ, ಅದ್ರಲ್ಲೇ ಅಡ್ಜಸ್ಟ್ ಮಾಡ್ಕೊಳ್ಳಿ, ಆಮೇಲೆ ನೋಡೋಣ’ ಅಂತ ಹೇಳ್ತಾರೆ. ದಯವಿಟ್ಟು ನಂಬಬೇಡಿ. ತಾತ್ಕಾಲಿಕ ಮೀಟರ್ ಇರೋದು ಮನೆ ಕಟ್ಟೋಕೆ ಮಾತ್ರ, ವಾಸ ಮಾಡೋಕೆ ಅಲ್ಲ. ಅದಕ್ಕೆ ಕಮರ್ಷಿಯಲ್ ರೇಟ್ (Commercial Rate) ಇರುತ್ತೆ, ಬಿಲ್ ಜಾಸ್ತಿ ಬರುತ್ತೆ ಮತ್ತು ಬೆಸ್ಕಾಂ ಅವರು ಫೈನ್ ಕೂಡ ಹಾಕ್ತಾರೆ. ಮನೆಗೆ ಗ್ರಹಪ್ರವೇಶ ಮಾಡೋ ಮುಂಚೆ Permanent Meterಗೆ ಅಪ್ಲೈ ಮಾಡಿ.”

ಒಸಿ’ (OC) ಅಂದರೆ ಏನು? ಅದು ಯಾಕೆ ಬೇಕು?

ಉತ್ತರ: ‘ಒಸಿ’ ಅಂದ್ರೆ ಆಕ್ಯುಪೆನ್ಸಿ ಸರ್ಟಿಫಿಕೇಟ್. ಅಂದ್ರೆ ನೀವು ಕಟ್ಟಿದ ಮನೆ ವಾಸ ಮಾಡಲು ಯೋಗ್ಯವಾಗಿದೆ ಮತ್ತು ಪ್ಲಾನ್ ಪ್ರಕಾರವೇ ಕಟ್ಟಲಾಗಿದೆ ಎಂದು ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆ ಕೊಡುವ ಸರ್ಟಿಫಿಕೇಟ್. ಇದು ಇಲ್ಲದಿದ್ದರೆ ಪರ್ಮನೆಂಟ್ ಕರೆಂಟ್ ಸಿಗಲ್ಲ.

Leave a Reply

Your email address will not be published. Required fields are marked *