Greater Bengaluru News9: ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯುವಂತೆ ಆಸೆ ಮೂಡಿಸಿ ಬೆಸ್ಕಾಂ ಎಂಜಿನಿಯರ್ಗೆ 18.70 ಲಕ್ಷ ರೂ. ಹಣವನ್ನು ಆನ್ಲೈನ್ ಮೂಲಕ ಹಾಕಿಸಿಕೊಂಡು ವಂಚಿಸಿರುವ ಪ್ರಕರಣ ಜಿಲ್ಲಾ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಬೆಸ್ಕಾಂ ಉಪ ವಿದ್ಯುತ್ ಕೇಂದ್ರ ಎಂಜಿನಿಯರ್ ಆನಂದ್ ಎಚ್.ಆರ್. ವಂಚನೆಗೆ ಒಳಗಾದ ವ್ಯಕ್ತಿ. ಇವರ ವಾಟ್ಸ್ಆ್ಯಪ್ ನಂಬರ್ಗೆ ಮೆಸೇಜ್ ಕಳುಹಿಸಿದ ಸೈಬರ್ ಕಳ್ಳರು, ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ 18 ಲಕ್ಷ ರೂ.ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ್ದಾರೆ.


