Greater Bengaluru News9: ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಇಂಜಿನಿಯರ್ಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.
ರಾಮನಗರ ಗ್ರಾಮಾಂತರ ಉಪ ವಿಭಾಗದ ಪ್ರಕಾಶ್ ಎನ್ನುವ ಓರ್ವ ಪ್ರಭಾರ ಜೆಇ, ಬೆಸ್ಕಾಂ ಕಂಪನಿಯ ಸುಮಾರು 9 ವಿದ್ಯುತ್ ಕಂಬಗಳನ್ನು ಹಾಕಿ, ಒಂದು ಎಸ್ಎಸ್ಪಿ ಅಥವಾ ಬೋರ್ವೆಲ್ ಕನೆಕ್ಷನ್ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ, ಶೀಘ್ರ ಸಂಪರ್ಕ ಯೋಜನೆಗೆ ಸುಮಾರು 100 ಮೀಟರ್ಗಳ ಅಂತರ ಇರಬೇಕು. ಎರಡು ಬೋರ್ವೆಲ್ಗಳು ಇರಬೇಕು ಹಾಗೂ ಪ್ರತ್ಯೇಕ ಓನರ್ಗಳು ಇರಬೇಕು ಮತ್ತು ಎರಡು ಸರ್ವೆ ನಂಬರ್ಗಳು ಇರಬೇಕು. ಆದರೆ, ಇಲ್ಲಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಂದೇ ಓನರ್ ಇರುವಂತಹ ಕೃಷಿ ಜಮೀನಿಗೆ ಹಿಂದಕ್ಕೆ ಮೂರು ಹಾಗೂ ಮುಂದಕ್ಕೆ ಮೂರು ಕಂಬಗಳನ್ನು ಹಾಗೂ ಎರಡು ಕಂಬಗಳನ್ನು ಹಾಕಿ, ಒಂದು ಸ್ಟ್ರಕ್ಚರ್ ಮಾಡಿ, ಅದಕ್ಕೊಂದು ಟ್ರಾನ್ಸ್ಫಾರ್ಮರ್ ಹಾಕಿದ್ದಾರೆ. ಇದೆಲ್ಲವನ್ನು ಸ್ವಯಂ ಕಾರ್ಯ ಯೋಜನೆ ಅಡಿ ಮಾಡಬೇಕಿತ್ತು. ಆದರೆ, ಬೆಸ್ಕಾಂ ಕಂಪನಿಯ ವಿದ್ಯುತ್ ಕಂಬಗಳು ಹಾಗೂ ವೈರ್ಗಳನ್ನು ಬಳಸಿ, ಈ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿಯನ್ನು ಯಾವ ಯೋಜನೆ ಅಡಿ ಮಾಡಲಾಗಿದೆ? ಯಾವ ರೀತಿ ವರ್ಕ್ ಆರ್ಡರ್ಗೆ ಸಹಿ ಹಾಕಿದ್ದಾರೆ? ಎಂಬ ಪ್ರಶ್ನೆ ಮೂಡಿದೆ.
ಎಸ್ಎಸ್ಪಿ ಕಾಮಗಾರಿ ಮಾಡಿಸುವಾಗ ಕಂಬ, ವೈರ್ ಹಾಗೂ ಕೂಲಿ ಕಾರ್ಮಿಕರನ್ನು ಸ್ವತಃ ಅರೇಂಜ್ ಮಾಡಬೇಕು. ಹಣ ಕಟ್ಟಿದ ಮೇಲೆ ಟ್ರಾನ್ಸ್ಫಾರ್ಮ್ ಕೊಡುತ್ತಾರೆ. ಈ ರೀತಿ ಕೊಡುವಾಗ ಎರಡು ಓನರ್, ಎರಡು ಸರ್ವೇ ನಂಬರ್ ಇರಬೇಕು. ಆದರೆ, ಒಬ್ಬರಿಗೆ ಹೇಗೆ ಕೊಟ್ಟರು? ಓರ್ವ ಜೆಇ ತನ್ನ ಅಡಿಯಲ್ಲಿ ಈ ಒಂದು ಕಾಮಗಾರಿಯನ್ನು ಮಾಡಿಸಿದ್ದಾರೆ. ಇದಕ್ಕೆ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಇದೆ.


