Greater Bengaluru News9 : ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ 31 ರಂದು ಮದ್ಯ ಮಾರಾಟದ ಅವಧಿಯನ್ನ ವಿಸ್ತರಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಸದ್ಯ ಮದ್ಯ ಪ್ರಿಯರಿಗಾಗಿ ಹೊಸ ವರ್ಷ ಆಗಮನಕ್ಕಾಗಿ ಡಿಸೆಂಬರ್ 31ರ ಬೆಳಗ್ಗೆ ಸೂರ್ಯೋದಯ ಆಗುವ ಮುನ್ನವೇ ಬಾರ್ಗಳು ಓಪನ್ ಆಗಿರುತ್ತವೆ.
ಇನ್ನು, ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವೇಶ ಟಿಕೆಟ್ ಹಾಗೂ ಪಾಸ್ ವಿತರಿಸ್ಬೇಕು.. ಬಾಲಕ, ಬಾಲಕರಿಗೆ ಮದ್ಯ ಪೊರೈಸುವಂತಿಲ್ಲ.. ತಪಾಸಣೆ ಬಿಗಿಗೊಳಿಸಬೇಕು.. ಸಂಶಯಾಸ್ಪದ ವಸ್ತುಗಳು, ಹಾಗೂ ವ್ಯಕ್ತಿಗಳು ಕಂಡು ಬಂದ್ರೆ ಪೊಲೀಸರಿಗೆ ಮಾಹಿತಿ ನೀಡ್ಬೇಕು. ಸೆಲೆಬ್ರೇಷನ್ಸ್ ಪ್ಲೇಸ್ನಲ್ಲಿ ಅಗ್ನಿ ನಿರೋಧಕ ಉಪಕರಣ ಅಳವಡಿಸಬೇಕು.
ಅಗ್ನಿ ಅವಘಡಗಳು, ಕಾಲ್ತುಳಿತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು..ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರೋ ಸ್ಥಳದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.. ಪ್ರವೇಶದ್ವಾರ, ನಿರ್ಗಮನ ದ್ವಾರ, ವಾಹನ ನಪಾಕಿಂಗ್ ಸ್ಥಳ ಹಾಗೂ ಕಾರ್ಯಕಚ್ರಮದ ಸ್ಥಳಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ಎಚ್ಚರ ವಹಿಸ್ಬೇಕು.. ಕಾರ್ಯಕ್ರಮ ನಡೆಯಲು ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ದೃಶ್ಯಾವಳಿಗಳನ್ನ ಕನಿಷ್ಠ 30 ದಿನಗಳವರೆಗೆ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಅಂತ ಮಾಲೀಕರಿಗೆ ಸೂಚನೆ ನೀಡ್ಲಾಗಿದೆ.


