BBMP
Loading ...

Metro

Greater Bengaluru News9: ನಮ್ಮ ಮೆಟ್ರೋ ರೈಲುಗಳ ಗ್ರೀನ್ ಲೈನ್ ಮೆಟ್ರೋ ರೈಲುಗಳು ನೇರಳೆ ಮಾರ್ಗಕ್ಕೆ ಶಿಫ್ಟ್ ಆಗಲಿವೆ. ಕಾರಣ ಏನು? ಹಸಿರು ಮಾರ್ಗಕ್ಕೆ ಹೊಸ ರೈಲುಗಳು ಬರಲಿರುವ ಹಿನ್ನೆಲೆ ಹಳೇ ರೈಲುಗಳನ್ನು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಹೊಸ ರೈಲುಗಳ ಎಂಟ್ರಿ ಬಳಿಕ ಹಳೇ ರೈಲುಗಳನ್ನು ನೇರಳೆ ಮಾರ್ಗಕ್ಕೆ ಶಿಫ್ಟ್ ಮಾಡುವ ಯೋಜನೆ ಇದಾಗಿದೆ. ಗ್ರೀನ್ ಲೈನ್​​ಗೆ ಚೀನಾದಿಂದ ಒಟ್ಟು 21 ಹೊಸ ರೈಲು ಸೆಟ್‌ಗಳು ಬರಲಿವೆ. ಈ ಎಲ್ಲಾ ಹೊಸ ರೈಲುಗಳನ್ನು ಹಸಿರು ಮಾರ್ಗದಲ್ಲಿ ಬಳಕೆ ಮಾಡುವುದಾಗಿ ನಿರ್ಧರಿಸಲಾಗಿದೆ. ಹೀಗಾಗಿ, ಹೊಸ ರೈಲುಗಳು ಬಂದ ನಂತರ ಸದ್ಯ ಹಸಿರು ಮಾರ್ಗದಲ್ಲಿರುವ ಹಳೇ ರೈಲುಗಳನ್ನು ನೇರಳೆ ಮಾರ್ಗಕ್ಕೆ ಶಿಫ್ಟ್ ಮಾಡಲಾಗುವುದು.

ಪ್ರಸ್ತುತ ಮಾಹಿತಿಯ ಪ್ರಕಾರ, 17 ರೈಲುಗಳನ್ನು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಹೊಸ ರೈಲುಗಳ ನಿರ್ವಹಣೆಗೆ ಪೀಣ್ಯ ಡಿಪೋ ಆಯ್ಕೆ ಮಾಡಲಾಗಿದೆ. ಹೀಗಾಗಿ, ಎಲ್ಲಾ ಹೊಸ ರೈಲುಗಳನ್ನು ಹಸಿರು ಮಾರ್ಗಕ್ಕೆ ಫಿಕ್ಸ್ ಮಾಡಲಾಗುವುದು.

ಈ ನಿರ್ಣಯದ ಹಿನ್ನೆಲೆಯಲ್ಲಿ, ನೇರಳೆ ಮತ್ತು ಹಸಿರು ಮಾರ್ಗಗಳ ನಡುವೆ ರೈಲುಗಳ ಮರುಹಂಚಿಕೆ ಮಾಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಪೂರೈಸುವ 21 ಆರು ಬೋಗಿಯ ರೈಲುಗಳು ಬರಲಿವೆ. ಈಗಾಗಲೇ ಕಳೆದ ಜನವರಿಯಲ್ಲಿ ಒಂದು ರೈಲು ಬಂದಿದ್ದು, ಪ್ರಾಯೋಗಿಕ ಅಭ್ಯಾಸ ನಡೆಯುತ್ತಿದೆ. ಒಂದೇ ಬಗೆಯ ರೈಲುಗಳನ್ನು ಬೇರೆ ಬೇರೆ ಡಿಪೋಗಳಲ್ಲಿ ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ, ಹೊಸದಾಗಿ ಬರುವ ಎಲ್ಲಾ ರೈಲುಗಳನ್ನು ಹಸಿರು ಮಾರ್ಗದಲ್ಲೇ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ. ಸದ್ಯ ಹಸಿರು ಮಾರ್ಗದಲ್ಲಿರುವ ರೈಲುಗಳನ್ನು ನೇರಳೆ ಮಾರ್ಗಕ್ಕೆ ಶಿಫ್ಟ್ ಮಾಡಲಾಗುವುದು.

Leave a Reply

Your email address will not be published. Required fields are marked *