Greater Bengaluru News9: ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಮುಂಬಡ್ತಿ ದೊರೆತಿದ್ದು, ಅವರನ್ನು ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನಿಯೋಜಿಸಲಾಗಿದೆ.
ಇತ್ತೀಚೆಗೆ ಜೈಲಿನಲ್ಲಿನ ಅಕ್ರಮ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಮುಖ ಬದಲಾವಣೆಯನ್ನು ಮಾಡಿದೆ. ಅಲೋಕ್ ಕುಮಾರ್ ನೇಮಕವಾದ ಸುದ್ದಿ ಹೊರಬಿದ್ದ ಕೂಡಲೇ ಜೈಲಿನಲ್ಲಿರುವ ಕ್ರಿಮಿಗಳಲ್ಲಿ ಆತಂಕವೂ ಕಾಣಿಸಿಕೊಂಡಿದೆ. ಇದಕ್ಕೂ ಮೊದಲು ಕಾರಾಗೃಹ ಎಡಿಜಿಪಿಯಾಗಿದ್ದ ದಯಾನಂದ್ ಅವರನ್ನು ತರಬೇತಿ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಈ ಬದಲಾವಣೆಗಳಿಂದ ಕಾರಾಗೃಹ ಇಲಾಖೆಯಲ್ಲಿದ್ದ ಅಕ್ರಮಗಳಿಗೆ ಈಗ ಬ್ರೇಕ್ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.


