Greater Bengaluru News9 : ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಇಲ್ಲಿನ ಬೆಸ್ಕಾಂ ಶಾಖಾ ಕಚೇರಿಗೆ ಹೆಗ್ಗೆರೆ ಗ್ರಾಮಸ್ಥರು ಬೀಗ ಜಡಿದು ನ.20ರ ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ 1 ತಿಂಗಳಿಂದ ಗ್ರಾಮದ ಸುತ್ತ ಚಿರತೆ ಒಡಾಟವಿದೆ ರಾತ್ರಿ ಸಮಯ ವಿದ್ಯುತ್ ನಿಲ್ಲಿಸಿ ಹಗಲು ವೇಳೆ ವಿದ್ಯುತ್ ನೀಡಿ ಎಂದರೂ ಇಲ್ಲಿನ ಬೆಸ್ಕಾಂ ಸಿಬ್ಬಂದಿ ರಾತ್ರಿಯೇ ತ್ರೀ ಫೇಸ್ ವಿದ್ಯುತ್ ನೀಡುತ್ತಾರೆ. ಇದರಿಂದ ರಾತ್ರಿ ವೇಳೆ ನೀರು ಹಾಯಿಸಲು ರೈತರಿಗೆ ಭಯದ ವಾತಾವರಣದ ಸಮಸ್ಯೆ ಆಗುತ್ತಿದೆ. ಇದನ್ನು ತಪ್ಪಿಸಿ ಎಂದರೆ ಬೆಸ್ಕಾಂ ಶಾಖಾಧಿಕಾರಿ ಸಾಯಿರಿ ನಾವೇನು ಮಾಡೋಣ ಎಂದು ಬೇಜವಬ್ದಾರಿಯುತ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾ ನಿರತ ರೈತರು ಆರೋಪಿಸಿದರು.
ಮುಂದುವೆರದು ಮಾತನಾಡಿದ ಪ್ರತಿಭಟನಕಾರರು, ನೀಡುವ ವಿದ್ಯುತ್ ಕೂಡ ಕಳಪೆ ಆಗಿರುತ್ತದೆ. 6 ತಾಸಿನಲ್ಲಿ 1-2 ಗಂಟೆ ವಿದ್ಯುತ್ ಕಡಿತ ಮಾಡುತ್ತಾರೆ. ಕೇಳಿದರೆ ವಿದ್ಯುತ್ ರಿಪೇರಿ ನಡೆಯುತ್ತಿದೆ ಎಂಬ ಸಬೂಬು ನೀಡುತ್ತಾರೆ. ರೈತರ ಪೊನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಚೇರಿಗೆ ಬರುವ ರೈತರ ಬಗ್ಗೆ ಗೌರವ ನೀಡುವುದಿಲ್ಲ. ರೈತರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದ ಇಲ್ಲಿನ ಶಾಖಾಧಿಕಾರಿಗಳು ರೈತರ ಎಷ್ಟೇ ದೂರುಗಳನ್ನು ನೀಡಿದರೂ ಸ್ಪಂದಿಸದೆ ಉದಾಸೀನ ಮಾಡುತ್ತಾರೆ ಎಂದು ದೂರಿದರು.
ಮಂಜುನಾಥ್, ಉಮೇಶ್, ನಾಗರಾಜ್, ರಾಜು, ಕಲ್ಲಪ್ಪ, ಬಸವರಾಜ್ , ಲೋಹಿತಾಶ್ವ, ತಿಪ್ಪೇಶ್ ಇತರರಿದ್ದರು.


