BBMP
Loading ...

KEB

Greater Bengaluru News9 : ಇದೇ ಶನಿವಾರ (ನ,29) ದಂದು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಇಂಜಿನಿಯರ್​ ಬಸವಣ್ಣ. ಸಿ ಮತ್ತು ಅವರ ತಂಡಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಭರ್ಜರಿ ಗೆಲುವಿನತ್ತ ಮನ್ನಡೆಯುತ್ತಿದೆ.

ನಗರದ ರೇಸ್ ಕೋರ್ಸ್ ಅಡ್ಡ ರಸ್ತೆಯಲ್ಲಿರುವ ಸಿಲ್ವರ್ ಜುಬಿಲಿ ಬಿಲ್ಡಿಂಗ್. ನಂ. 28ರಲ್ಲಿ ಶನಿವಾರ ಚುನಾವಣೆ ನಡೆಯಲಿದ್ದು, ಈ ವೇಳೆ ಬಸವಣ್ಣ ಮತ್ತು ಅವರ ತಂಡಕ್ಕೆ ಮತದಾನ ಮಾಡುವಂತೆ ಮನವಿ ಮಾಡಲಾಗಿದೆ. ಈಗಾಗಲೇ ಅವರ ಪರ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಗೆಲ್ಲುವುದು ಬಹುತೇಕ ಖಚಿತವಾದಂತಿದೆ. ಬಸವಣ್ಣ ಅವರ ದೂರದೃಷ್ಟಿ, ಜವಾಬ್ದಾರಿತನ, ನವೀನತೆ, ಧೈರ್ಯ, ಸಂವಹನ ಕೌಶಲ್ಯ, ಪ್ರೇರಣೆ, ಸಹಾನುಭೂತಿ ಹಾಗೂ ನಿರ್ಧಾರದ ಸಾಮರ್ಥ್ಯವನ್ನು ಬಹುತೇಕ ಮಂದಿ ಮೆಚ್ಚಿಕೊಂಡಿದ್ದು, ಚುನಾವಣೆಯಲ್ಲಿ ಎಲ್ಲರು ಅವರ ತಂಡದ ಕೈಹಿಡಿಯಲಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಬಸವಣ್ಣ ಅವರು ಪ್ರಮುಖ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ. ಆತ್ಮೀಯ ಸಹೋದರ, ಸಹೋದರಿ ಮತ್ತು ಹಿರಿಯ ಇಂಜಿನಿಯರುಗಳೇ, ನಾನು ಬಸವಣ್ಣ ಸಿ, ಬೆಸ್ಕಾಂನ ಬೆಂಗಳೂರು ಗ್ರಾಮೀಣ ವೃತ್ತದಲ್ಲಿ ಅಧೀಕ್ಷಕ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು 1998 ರಲ್ಲಿ ಅಂದಿನ ಕೆ.ಇ.ಬಿ.ಯಲ್ಲಿ ಸಹಾಯಕ ಇಂಜಿನಿಯರ್ (ವಿ.) ಆಗಿ ಸೇವೆಯನ್ನು ಪ್ರಾರಂಭಿಸಿ ನಂತರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ (ವಿ.) ಆಗಿ ರಾಜ್ಯದ ಹಲವಾರು ಭಾಗಗಳಲ್ಲಿ ಅಂದರೆ ಹನೂರು, ನಂಜನಗೂಡು, ಬಾಳೆಹೊನ್ನೂರು. ಚನ್ನಪಟ್ಟಣ. ಸೇಡಂ, ಮದ್ದೂರು, ಬೆಂಗಳೂರು, ಹೊಸಕೋಟೆಯಲ್ಲಿ ಕಾರ್ಯನಿರ್ವಹಿಸಿ ಈಗ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಕೆಲಸ ನಿರ್ವಹಿಸಿದ ಸ್ಥಳಗಳಲ್ಲಿನ ಸಹೋದ್ಯೋಗಿಗಳ ಮತ್ತು ರಾಜ್ಯಾದ್ಯಂತ ಇರುವ ಎಲ್ಲ ಸ್ನೇಹಿತರು ನನ್ನ ಮೇಲೆ ಇಟ್ಟಿರುವ ಅಕ್ಕರೆಯೇ ನನ್ನ ಶಕ್ತಿಯಾಗಿದೆ. ಅವರೆಲ್ಲರೂ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ನಾನು ಯಾವತ್ತೂ ಚಿರ ಋಣಿಯಾಗಿರುತ್ತೇನೆ.

ನಾನು 1998 ರಲ್ಲಿ ಸೇವೆಗೆ ಸೇರಿದರೂ ಸಹ, ನನ್ನ ಮತ್ತು ಸಂಘದ ಜೊತೆಗೆ ನಂಟು 2011 ರಿಂದ ಪ್ರಾರಂಭವಾಯಿತು. ಇಂ. ಜಗದೀಶ್ ಸಾವಳಗಿ ರವರು ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಗೆಲ್ಲಿಸಲೇಬೇಕೆಂಬ ಮಹದಾಸೆಯಿಂದ ಮೈಸೂರಿನ ನನ್ನ ಸ್ನೇಹಿತರ ಜೊತೆಗೂಡಿ ನಮ್ಮ ಸಂಘದ ಚುನಾವಣಾ ಚಟುವಟಿಕೆಗಳಲ್ಲಿ ಭಾಗಿಯಾದೆನು. ಅಂದಿನಿಂದ ಪ್ರಾರಂಭವಾದ ಸದಸ್ಯರ ನಂಟು ಇಂದಿನವರೆಗೂ ಮುಂದುವರಿದಿದೆ. 2015 ಮತ್ತು 2019 ರ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಅತೀ ಹೆಚ್ಚು ಮತಗಳನ್ನು ಪಡೆದು ಚುನಾಯಿತನಾಗಿದ್ದೆನು. 2022 ರ ಚುನಾವಣೆಯಲ್ಲಿ ಇಂ.ಮುನಿಗೋಪಾಲರಾಜುರವರು ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದಾಗ ಪ್ರತಿ ಬಾರಿಯಂತೆ ಇಡೀ ರಾಜ್ಯ ಸಂಚರಿಸಿ ಸದಸ್ಯರನ್ನು ಸಂಘಟಿಸಿ ಸಂಪರ್ಕ ಸಾಧಿಸಿದೆನು.

ಹಿಂದಿನ ದಿನಗಳಲ್ಲಿ ಸಂಘವು ಹಲವಾರು ಧೀಮಂತ ನಾಯಕತ್ವದ ವ್ಯಕ್ತಿಗಳ ಅಡಿಯಲ್ಲಿ ಸಂಘ ಮತ್ತು ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸಿ, ಸರ್ಕಾರ ಮತ್ತು ಆಡಳಿತ ಮಂಡಳಿಯ ಜೊತೆಗೆ ಸುಮಧುರ ಬಾಂಧವ್ಯವನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿರುವುದು ಸಂಘದ ಹೆಮ್ಮೆಯಾಗಿದೆ. ಸಂಘವು ಆಡಳಿತ ಮಂಡಳಿಯ ವಿರುದ್ದವಾಗಿ ಮುಷ್ಕರಗಳನ್ನು ನಡೆಸಿರುವುದಿಲ್ಲ. ಅಂತಹ ಸಂದರ್ಭ ಬಂದಾಗ ಉತ್ತಮ ರಾಜಿ ಸಂಧಾನದ ಮೂಲಕ ಸಂಘದ ಸದಸ್ಯರಿಗೆ ಒಳಿತನ್ನು ಮಾಡುವಲ್ಲಿ ಯಶಸ್ವಿಯಾಗಿರುತ್ತದೆ.

ಆದರೆ ಇತ್ತೀಚಿನ ಅವಧಿಯಲ್ಲಿ ಸಂಘಕ್ಕೂ- ಸದಸ್ಯರಿಗೂ ಉತ್ತಮವಾದಂತ ಬಾಂಧವ್ಯದ ಕೊರತೆಯಾಗಿರುತ್ತದೆ. ಸಂಘದ ಸದಸ್ಯರಲ್ಲಿ ಆಶಾಭಾವನೆಯನ್ನು ಮೂಡಿಸಿ. ಭರವಸೆಯನ್ನು ತುಂಬುವ ಕೆಲಸವು ಈಗಿನ ಪರಿಸ್ಥಿತಿಯಲ್ಲಿ ಪ್ರಥಮ ಆದ್ಯತೆಯಾಗಿರುತ್ತದೆ. ಇದಕ್ಕಾಗಿ ಹಲವಾರು ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಸಂಘಕ್ಕೆ ಉತ್ತಮ ಮತ್ತು ಅನುಭವೀ ನಾಯಕತ್ವವು ಪರಿಸ್ಥಿತಿಯ ಅವಶ್ಯಕತೆಯಾಗಿದೆ. ಸಂಬಂಧವನ್ನು 2019-2022 ರ ನಮ್ಮ ತಂಡದ ಅವಧಿಯಲ್ಲಿ ಆಡಳಿತ ಮಂಡಳಿ ಮತ್ತು ಸರ್ಕಾರದ ಜೊತೆಗೆ ಒಳ್ಳೆಯ ಹೊಂದುವ ಮೂಲಕ ಯುವ ಇಂಜಿನಿಯರುಗಳಿಗೆ ಮತ್ತು ಹಿರಿಯ ಇಂಜಿನಿಯರುಗಳಿಗೆ ಐತಿಹಾಸಿಕ ಎನ್ನಬಹುದಾದ ಉತ್ತಮವಾದಂತಹ ಕೆಲಸಗಳನ್ನು ಮಾಡಿದ ಅವಧಿಯಾಗಿರುತ್ತದೆ.

ಅವುಗಳಲ್ಲಿ ಪ್ರಮುಖವಾದುದು;

  • AEE ನೇರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿದುದು.
  • AEE ಹಂತದ ನೇರ ನೇಮಕಾತಿ ಕೋಟಾವನ್ನು ಶೇ25 ರಿಂದ ಶೇ 10 ಕ್ಕೆ ಇಳಿಕೆ. (ಇದರಿಂದ 300ಕ್ಕೂ ಹೆಚ್ಚು A EE ಹುದ್ದೆಗಳು DR ಕೋಟಾದಿಂದ PR ಕೋಟಾ ಗೆ ವರ್ಗಾವಣೆಯಾಗಿ ಸೇವಾನಿರತ ಸಹಾಯಕ ಇಂಜಿನಿಯರುಗಳ ಪದೋನ್ನತಿಯ ಅವಕಾಶ ಹೆಚ್ಚಾಗಿರುತ್ತದೆ)
  • AEE ನೇರ ನೇಮಕಾತಿಯ ಮಾನದಂಡಗಳ ಮಾರ್ಪಾಡು. (BE ಪದವಿ ಮಾನದಂಡವನ್ನು BE ಪದವಿ+ 5 ವರ್ಷಗಳ ಸೇವೆ MTech ಪದವಿ + 2 ವರ್ಷಗಳ ಸೇವೆಯ ಜೊತೆ)
  • ಕಲ್ಯಾಣ ಕರ್ನಾಟಕ ಭಾಗದ ಸದಸ್ಯರಿಗೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 371J ಅನುಚ್ಛೇದವನ್ನು ಜಾರಿ ಮಾಡಿ ಪದೋನ್ನತಿಯನ್ನು ಒದಗಿಸಿರುವುದು.
  • ಏಪ್ರಿಲ್ 2018 ರಿಂದ ಜಾರಿಗೆ ಬರುವಂತೆ DCRG ಮತ್ತು ಕುಟುಂಬ ಪಿಂಚಣಿಯನ್ನು NDCPS ಸದಸ್ಯರಿಗೆ ಒದಗಿಸಿರುವುದು
  • 15.09.2022 ರಂದು ನಡೆದ 135 ನೇ ಮಂಡಳಿ ಸಭೆಯಲ್ಲಿ ಶೇ.22ರ ವೇತನ ಹೆಚ್ಚಳವನ್ನು ಮಾಡಿದ ತೀರ್ಮಾನವನ್ನು ಮಂಡಳಿ ಸಭೆಯು ಅನುಮೋದಿಸಿರುವುದು.
  • ಕಂಪನಿವಾರು ನೇಮಕಾತಿ ಪದ್ಧತಿಯ ಬದಲಾಗಿ KPTCL ನಿಂದಲೇ ಅಧಿಸೂಚನೆ ಹೊರಡಿಸಿ ಕಂಪನಿವಾರು ನೇಮಕವಾಗಿದ್ದ ಸದಸ್ಯರಿಗೆ ಸಾಮಾನ್ಯ ಸೇವಾ ನಿಯಮಗಳನ್ನು (common seniority) 15.09.2022 ರಂದು ನಡೆದ 35ನೆ ಮಂಡಳಿ ಸಭೆಯಲ್ಲಿ ಅನುಮೋದಿಸಿರುವುದು.
  • ಸಿವಿಲ್ ಇಂಜಿನಿಯರಿಂಗ್ ವಿಭಾಗದವರಿಗೆ ರಾಜ್ಯಕ್ಕೆ ಇದ್ದ ಒಂದೇ ಒಂದು ಅಧೀಕ್ಷಕ ಇಂಜಿನಿಯರ್ ಹುದ್ದೆಯನ್ನು ಹೆಸ್ಕಾಂ ಮತ್ತು ಬೆಸ್ಕಾಂನಲ್ಲಿ ಸೃಷ್ಟಿ ಮಾಡಿಸಿದ್ದು.
  • ಮೈಸೂರಿನಲ್ಲಿ ಕನ್ವೆನ್ನನ್ ಹಾಲ್ (ಶೇ. 90 ರಷ್ಟು ಮುಗಿದಿದೆ), ಮತ್ತು ಮಂಗಳೂರಿನಲ್ಲಿ ಓಪನ್ ಏರ್ ಥಿಯೇಟರ್ ನಿರ್ಮಾಣ.
  • ಮೈಸೂರು ಕಟ್ಟಡಕ್ಕೆ 50 ಲಕ್ಷ ರೂಗಳ ಧನಸಹಾಯ, ಮಂಗಳೂರು ಕಟ್ಟಡಕ್ಕೆ 50 ಲಕ್ಷ ರೂಗಳ ಧನಸಹಾಯ, ಬಳ್ಳಾರಿ ಕಟ್ಟಡಕ್ಕೆ 15 ಲಕ್ಷ ರೂಗಳ ಧನಸಹಾಯ ಮತ್ತು ಕೋವಿಡ್ ಸಮಯದಲ್ಲಿ ರಾಜ್ಯದ ಎಲ್ಲಾ ಪ್ರಾದೇಶಿಕ ಮತ್ತು ವಲಯ ಕೇಂದ್ರಗಳಿಗೆ ಧನಸಹಾಯ.
  • ಧಾರವಾಡ, ಕೋಲಾರ ಮತ್ತು ರಾಯಚೂರಿನಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನಗಳ ಮಂಜೂರಾತಿ.
  • ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧವಾಗಿ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ಕಾಲಾನುಕಾಲಕ್ಕೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡು, ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಿರುವುದು.

ಇಂಧನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತೀವ್ರತರದ ಬದಲಾವಣೆಗಳಾಗುತ್ತಿದ್ದು ಪರಿಣಾಮಕಾರಿಯಾದ ಪ್ರತಿರೋಧಕ ಕ್ರಮಗಳನ್ನು ತೆಗೆದುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅತೀಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ಉತ್ತಮ ಸಮನ್ವಯತೆಯನ್ನು ಸಾಧಿಸಿ ರಾಜ್ಯದ ಇಂಧನ ಕ್ಷೇತ್ರಕ್ಕೆ ಮಾರಕವಾಗುವ ಕ್ರಮಗಳನ್ನು ಪ್ರತಿರೋಧಿಸಬೇಕಿದೆ. ಸಂಘದ ಸದಸ್ಯರಲ್ಲಿ ಶೇ.60ರಷ್ಟು ಯುವ ಇಂಜಿನಿಯರುಗಳಿದ್ದು ಅವರ ಪದೋನ್ನತಿಗೆ ಗಮನ ಹರಿಸುವುದು ತಕ್ಷಣದ ಪ್ರಥಮ ಆದ್ಯತೆಯಾಗಿರುತ್ತದೆ. NPSಗೆ ಒಳಪಡುವ ಅಧಿಕಾರಿಗಳಿಗೆ ಸರ್ಕಾರದ ಮಟ್ಟದಲ್ಲಿ ಮನವೊಲಿಸಿ OPS ಅನ್ನು ಜಾರಿಗೊಳಿಸಲು ಸಮರ್ಥವಾಗಿ ಪ್ರತಿಪಾದಿಸಿ ಪ್ರಯತ್ನಿಸುವುದು.ವಿಶೇಷವಾಗಿ 1.04.2006 ಮುಂಚೆ ಅಧಿಸೂಚನೆ ಹೊರಡಿಸಿ. ನಂತರ ನೇಮಕಾತಿ ಹೊಂದಿದ ಸಂಘದ ಸದಸ್ಯರಿಗೆ OPS ಸೌಲಭ್ಯ ಒದಗಿಸುವುದು ತಕ್ಷಣದ ಆದ್ಯತೆ. NDCPS ನಿಂದ NPS ಗೆ ಸರಾಗವಾಗಿ ಶೀಘ್ರಗತಿಯಲ್ಲಿ ವರ್ಗಾಯಿಸುವುದು.

ಸಹಾಯಕ ಇಂಜಿನಿಯರುಗಳಿಂದ ಹಿಡಿದು ಮುಖ್ಯ ಇಂಜಿನಿಯರುಗಳ ಹುದ್ದೆಯವರಿಗೆ ಮತ್ತು ಮಹಿಳಾ ಇಂಜಿನಿಯರುಗಳ ಹಲವಾರು ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡೇ, ನಾನು ನನ್ನ ಸಮರ್ಪಣಾ ಮನೋಭಾವದ ತಂಡದೊಂದಿಗೆ 2025-28ರ ಅವಧಿಯ ಚುನಾವಣೆಗೆ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ತಮ್ಮ ಅಮೂಲ್ಯವಾದ ಮತವನ್ನು ನೀಡಿ ನಮ್ಮ ಇಡೀ ತಂಡವನ್ನು ಆಶೀರ್ವದಿಸಿ ಆರಿಸುವಂತೆ ವಿನಮ್ರವಾಗಿ ಕೋರುತ್ತೇನೆ.

Leave a Reply

Your email address will not be published. Required fields are marked *