Greater Bengaluru News9 : ಬೆಂಗಳೂರಿನ ಪ್ರಖ್ಯಾತ ಮಂತ್ರಿ ಮಾಲ್ಗೆ ಮತ್ತೆ ಬೀಗ ಜಡಿಯಲಾಗಿದ್ದು, ಸುಮಾರು ಮೂವತ್ತು ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಜಿಬಿಎ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಇದರಿಂದ ಮಾಲ್ನಲ್ಲಿರುವ ನೌಕರರು ಮತ್ತು ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ.
ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ಅಭಿಷೇಕ್ ಡೆವೆಲಪರ್ಸ್ ತಾರಿಗೆ ಅವರ ಒಡೆತನದ್ದಾಗಿದೆ. ಮಾಲ್ ಮಾಲೀಕರಿ ಜಿಬಿಎಗೆ ಕಟ್ಟಬೇಕಾಗಿರುವ ತೆರಿಗೆಯನ್ನ ಸರಿಯಾಗಿ ಪಾವತಿ ಮಾಡಿಲ್ಲ. ಇವ್ರು 30 ಕೋಟಿ 81 ಲಕ್ಷದ 45 ಸಾವಿರದ 600 ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಗಿ ಸೀಜ್ ಮಾಡಲಾಗಿದೆ.
ತೆರಿಗೆ ಪಾವತಿ ಬಗ್ಗೆ ಜಿಬಿಎ ಹಲವು ಬಾರಿ ನೋಟಿಸ್ ಕೊಟ್ಟಿದ್ರು ಮಂತ್ರಿ ಮಾಲ್ ಆಡಳಿತ ವರ್ಗ ಯಾವುದೇ ಪ್ರತಿಕ್ರಿ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿ ನೋಟಿಸ್ ಅಂಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ , “ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಮಾಲ್ ಸೇರಿದ್ದು, ಆಸ್ತಿ ತೆರಿಗೆ ಪಾವತಿಸದ ಕಾರಣ ಸೀಜ್ ಮಾಡಲಾಗಿದೆ. ಹಲವಾರು ಬಾರಿ ನೋಟಿಸ್ ನೀಡಿದ್ದೇವೆ. ಮಂತ್ರಿ ಮಾಲ್ ನಷ್ಟದಲ್ಲಿ ಇರಲಿಕ್ಕಿಲ್ಲ. ನಿಯಮದ ಪ್ರಕಾರ ತೆರಿಗೆ ಪಾವತಿಸಬೇಕು” ಎಂದು ತಿಳಿಸಿದ್ದಾರೆ.


