BBMP
Loading ...

New Project (1)

Greater Bengaluru news9: ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಇಂಧನ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೇ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಶರಣಪ್ಪ ಕುರುಬನಾಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲೋಕಾಯುಕ್ತ ಹೆಸರು ದುರ್ಬಳಕೆ, ಹಣ ವಸೂಲಿ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಶರಣಪ್ಪನ ವಸೂಲಿ ದಂಧೆಗೆ ಲೋಕಾಯುಕ್ತ ಅಧಿಕಾರಿಗಳು ಬ್ರೇಕ್​​ ಹಾಕಿದ್ದಾರೆ. ಶರಣಪ್ಪ ವಿರುದ್ಧ ಲೋಕಾಯುಕ್ತಕ್ಕೆ ಕಾಂಟ್ರಾಕ್ಟರ್ಸ್​ ದೂರು ನೀಡಿದ್ದರು. ದೂರು ಪರಿಶೀಲಿಸಿ FIR ಅನ್ನು ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿದ್ದಾರೆ. ಶರಣಪ್ಪ ಕುರಬನಾಳ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.

FIR ಬೆನ್ನಲ್ಲೇ ಶರಣಪ್ಪನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಶರಣಪ್ಪನ ವಸೂಲಿ ದಂಧೆ ಮಾಡುತ್ತಿದ್ದರು.

ಸಮಾಜಸೇವೆಯ ಮುಖವಾಡ ಧರಿಸಿ, ಬೆಸ್ಕಾಂ ಅಧಿಕಾರಿಗಳಿಂದ ಶರಣಪ್ಪ ವಸೂಲಿ ಮಾಡುತ್ತಿದ್ದ. ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಆ ಬಳಿಕ ಲೋಕಾಯುಕ್ತ ಹೆಸರು ದುರ್ಬಳಕೆ ಮತ್ತು ಬೆದರಿಸಿ ಹಣ ವಸೂಲಿ ಹಿನ್ನಲೆಯಲ್ಲಿ ಆಲರ್ಟ್ ಆದರು.

ಭಾರತೀಯ ನ್ಯಾಯ ಸಂಹಿತೆ BNS 2023 (U/s-308(2), 308(3) ಅಡಿ FIR ದಾಖಲಾಗಿದೆ. ಶರಣಪ್ಪ ವಸೂಲಿ ದಂಧೆಯ ಆಡಿಯೋ, ವಿಡಿಯೋಗಳ ನೈಜತೆ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸುವರು. ಆಡಿಯೋ, ವಿಡಿಯೋಗಳು ಪ್ರೂವ್ ಆದ್ರೆ ಶರಣಪ್ಪನಿಗೆ ಜೈಲೇ ಗತಿ.

BNS 2023 (U/s-308(2), 308(3) ಕಾಯ್ದೆ ಅಡಿ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶ ಇದೆ. ಜೈಲು ಶಿಕ್ಷೆ ಮತ್ತು ದಂಡ ಎರಡೂ ವಿಧಿಸಲು ಅವಕಾಶ ಇದೆ.

ಗೋಮುಖ ವ್ಯಾಘ್ರ ಶರಣಪ್ಪ
ಎಸ್ಕಾಂನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನದಂತಿದ್ದ ಸಿದ್ದಗಂಗಾ ಎಲೆಕ್ಟ್ರಿಲ್ಸ್​ನ ಶರಣಪ್ಪ ಅವರ ನಿಜ ಮುಖ ಬಟಾಬಯಲಾಗಿದೆ. ಶರಣಪ್ಪ ಓರ್ವ ಗೋಮುಖ ವ್ಯಾಘ್ರ ಎಂಬುದನ್ನು ಕೆ.ಆರ್.ಎಸ್. ಪಕ್ಷದ ಸೈನಿಕರು ಬಯಲು ಮಾಡಿದ್ದರು.

ವಿಡಿಯೋವೊಂದು ವೈರಲ್​ ಆಗಿದ್ದು, ಅದರ ಸಂಭಾಷಣೆಯಲ್ಲಿ ಗುತ್ತಿಗೆದಾರ ಎಂಬ ಲೋಕೇಶ್ ( ಕೆ. ಆರ್. ಎಸ್. ನ ಸೈನಿಕ ) ಹಾಗೂ ಪವರ್ ಮ್ಯಾನ್ ಎಂಬ ಮತ್ತೊಬ್ಬ ಸೈನಿಕ (ದೇವರಾಜ್ ) ರವರುಗಳನ್ನು ವಾಜರಹಳ್ಳಿಯ ಹೋಟೆಲ್​ಗೆ ಕರೆಸಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದ ಪಕ್ಷದಲ್ಲಿ ಲೋಕಾಯುಕ್ತ ಎಸ್. ಪಿ. ವಂಶಿ ಕೃಷ್ಣ ರವರಿಗೆ ಹೇಳಿ ತಕ್ಷಣ ಬಂಧಿಸುತ್ತೇನೆ ಎಂದು ಗೋಮುಖ ವ್ಯಾಘ್ರ ಶರಣಪ್ಪ ಧಮ್ಕಿ ಹಾಕಿದ್ದ.

ಇದಿಷ್ಟೇ ಅಲ್ಲದೆ, ಸುಪರಿಡೆಂಟ್ ಇಂಜಿನಿಯರ್ ಚೇನ್ನಕೇಶವರೆಂದವರು ತಮ್ಮ ಅಕ್ರಮವನ್ನು ಮುಚ್ಚಿಹಾಕಲು ಒಂದು ಲಕ್ಷ ರೂಪಾಯಿ ನೀಡಿರುವುದನ್ನು ತಾವೇ ಒಪ್ಪಿಕೊಂಡಿದ್ದಾರೆ. ಇನ್ನೂ ಮುಂದೆ ಪವರ್ ಮ್ಯಾನ್‌ನ್ನು ಹೆದರಿಸಿ, ನೀನು ಮೌನವಾಗಿರದಿದ್ದರೆ ಡಿ.ಟಿ. ರಮೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಅವರನ್ನು ಕರೆಸಿ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ. ಲೋಕಾಯುಕ್ತರಿಂದ ಬಂಧಿಸಲ್ಪಡಿಸುತ್ತೇನೆ ಎಂದು ಬೆದರಿಕೆ ಹಾಕಿರುವುದು ಲಕ್ಷಾಂತರ ಕಾರ್ಮಿಕರ ಬೆವರು ಬಾಡಿಗೆ ತಿನ್ನುವ ಮಾನಹೀನ ಕೃತ್ಯವಾಗಿದೆ.

ಈ ರೀತಿ ಘೋರ ಕೃತ್ಯಗಳಿಂದ ಲೋಕಾಯುಕ್ತ ಸಂಸ್ಥೆಯ ಗೌರವಕ್ಕೂ ಮಸಿ ಬಡಿದ ಶರಣಪ್ಪನಂತಹ ಗುತ್ತಿಗೆದಾರರನ್ನು ಈಗ ಸಮಾಜ ಮುಂದೆ ಬಯಲಾಗಿಸುವ ಕೆಲಸವನ್ನು ಕೆ.ಆರ್.ಎಸ್. ಪಕ್ಷದ ದಿಟ್ಟ ಸೈನಿಕರು ಮಾಡಿದ್ದಾರೆ.

ಎಫ್ ಐ ಆರ್ ನಲ್ಲಿ ಏನಿದೆ?

ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಸಿದ್ದಗಂಗಾ ಎಲೆಕ್ನಿಕಲ್ ಎಂಟರ್ಪ್ರೈಸಸ್ ನ ಪ್ರೊಪ್ರೈಟರ್ ಆದ ಶರಣಪ್ಪ ಕುರುಬನ ಮೊಬೈಲ್ ಸಂಖ್ಯೆ: 9620202031ರವರು ಕಳೆದ 19 ವರ್ಷಗಳಿಂದ ಬೆಂಗಳೂರು ನಗರದಲ್ಲಿ., ಎಲೆಕ್ನಿಕಲ್ ಕಾಂಟ್ರಾಕ್ಟ‌ರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಾಗಿ ಸಾಮಾಜಿಕ ಮಾಧ್ಯಮದಲ್ಲಿ. ಗುರುತಿಸಿಕೊಂಡಿರುತ್ತಾರೆ. ಶರಣಪ್ಪ ಕುರುಬನ ರವರು ಬೆಸ್ಕಾಂ ಅಧಿಕಾರಿಗಳ ಮತ್ತು ಎಲೆಕ್ನಿಕಲ್ ಕಾಂಟ್ರಾಕ್ಟರ್ ಮಧ್ಯ ನಡೆಯುವ ಹಣದ ವ್ಯವಹಾರಗಳ ಆಡಿಯೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಿ ಸದರಿ ಬೆಸ್ಕಾಂ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆದು ಲೋಕಾಯುಕ್ತ ಅಧಿಕಾರಿಗಳಿಗೆ ಹಣದ ವ್ಯವಹಾರದ ಬಗ್ಗೆ ತಿಳಿಸಿ ಅಧಿಕಾರಿಗಳನ್ನು ಅರೆಸ್ಟ್ ಮಾಡಿಸುವುದಾಗಿ ಹೆದರಿಸಿ ಇಲ್ಲವಾದಲ್ಲಿ, ತಮಗೆ ಹಣ ನೀಡಬೇಕೆಂದು ಹಣದ ಬೇಡಿಕೆಯನ್ನಿಟ್ಟಿರುತ್ತಾರೆ, ಲೋಕಾಯುತ್ರ ಹೆಸರನ್ನು ಬಳಸಿಕೊಂಡು ಹಣದ ಸುಲುಗೆ ಮಾಡುತ್ತಿರುವ ಶರಣಪ್ಪ ಕುರುಬನ ರವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕಿದೆ.

Leave a Reply

Your email address will not be published. Required fields are marked *