Greater Bengaluru News9 : ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಇಂದು (ನ.06) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಸಿನಿಮಾಗಳಾದ ‘ಓಂ’, ‘ಕೆಜಿಎಫ್’, ‘ಮೆಜೆಸ್ಟಿಕ್’, ‘ಜೋಡಿಹಕ್ಕಿ’ ಸೇರಿ ಹಲವಾರು ಸೂಪರ್ಹಿಟ್ ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದ ಹರೀಶ್, ಕೆಲವು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹರೀಶ್ ರಾಯ್, ಕೆಲವು ತಿಂಗಳುಗಳ ಹಿಂದಷ್ಟೆ ಸ್ಯಾಂಡಲ್ವುಡ್ ನಟರ ಬಳಿ ಸಹಾಯಹಸ್ತ ಕೇಳಿದ್ದರು. ಅವರ ಮನವಿಗೆ ಸ್ಟಾರ್ ಕಲಾವಿದರು ಸ್ಪಂದಿಸಿ, ಚಿಕಿತ್ಸೆಗೆ ಹಣ ನೀಡಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ಕನ್ನಡ, ತಮಿಳು ಸೇರಿ ಇತರೆ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಹರೀಶ್ ರಾಯ್ ಇನ್ನಿಲ್ಲ ಎಂಬ ಸುದ್ದಿ ತಿಳಿದ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹರೀಶ್ ಅಗಲಿದ್ದಾರೆ.


