BBMP
Loading ...

GT Mall

Greater Bengaluru News9 : ಯುವಕನೊಬ್ಬ ಮೂರನೇ ಮಹಡಿಯಿಂದ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್​ ಮಾಲ್ ​ನಲ್ಲಿ ಇಂದು (ಅ.20) ಬೆಳಗ್ಗೆ ಸಂಭವಿಸಿದೆ.

ಬೆಳಗ್ಗೆ ಮಾಲ್​ ತೆರೆಯುತ್ತಿದ್ದಂತೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾನೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯಕ್ಕೆ ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸದ್ಯ ಮಾಲ್​ನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಒಳಗೆ ಬಾರದಂತೆ ಮಾಲ್​ ಅನ್ನು ಮುಚ್ಚಲಾಗಿದೆ. ಮೃತಪಟ್ಟ ಯುವಕ ಆಯತಪ್ಪಿ ಕೆಳಗೆ ಬಿದ್ದನಾ? ಬೇಕು ಅಂತಾನೇ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡನಾ? ಅಥವಾ ಯಾರಾದರೂ ಕೆಳಗಡೆ ನೂಕಿದರಾ? ಎಂಬುದನ್ನು ತಿಳಿಯಲು ಪೊಲೀಸರು ಮಾಲ್​ ಒಳಗಡೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಸದ್ಯ ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿ ಬರಬೇಕಿದೆ. ಈ ಹಿಂದೆಯೂ ಜಿಟಿ ಮಾಲ್​ ವಿವಾದವೊಂದಕ್ಕೆ ಗುರಿಯಾಗಿತ್ತು. ಅದೇನೆಂದರೆ, ಪಂಚೆ ಧರಿಸಿ ಬಂದಿದ್ದ ರೈತನೊಬ್ಬನನ್ನು ಒಳಗಡೆ ಬಿಡದಿದ್ದಕ್ಕೆ ಮಾಲ್​ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಬಳಿಕ ಮಾಲ್​ಗೆ ಒಂದು ವಾರಗಳ ಕಾಲ ಬೀಗ ಕೂಡ ಜಡಿಯಲಾಗಿತ್ತು. ಇದೀಗ ಯುವಕನ ಸಾವಿನಿಂದಾಗ ಜಿಟಿ ಮಾಲ್​ ಮತ್ತೆ ಸುದ್ದಿಯಾಗಿದೆ.

Leave a Reply

Your email address will not be published. Required fields are marked *