BBMP
Loading ...

BWSSB

Greater Bengaluru News9 : ಇನ್ನು ಎರಡು ದಿನಗಳಲ್ಲಿ ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಲಿದೆ. ಇದಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರು ಪೋಲು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.

ಹೌದು, ಆಯುಧಪೂಜೆ ದಿನ ಕಾವೇರಿ ನೀರು  ದುರ್ಬಳಕೆ  ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ. ಅಂದರೆ, ಹಬ್ಬದ ದಿನ ಕಾವೇರಿ ನೀರಲ್ಲಿ ಕಾರು, ಬೈಕ್ ಸೇರಿದಂತೆ ತಮ್ಮ ವಾಹನಗಳನ್ನು ತೊಳೆಯುವಂತಿಲ್ಲ. ಅನಗತ್ಯವಾಗಿ ಕುಡಿಯುವ ನೀರನ್ನು ಪೋಲು ಮಾಡಿದರೆ ನಿಮ್ಮ ಕಿಸೆಯಿಂದ ದಂಡ ಪಾವತಿಸಬೇಕಾಗುತ್ತದೆ.

ಕಾವೇರಿ ನೀರನ್ನು ಕೇವಲ ಕುಡಿಯುವುದಕ್ಕೆ ಮಾತ್ರ ಬಳಸಬೇಕು. ಅದನ್ನು ಬಿಟ್ಟು ವಾಹನ ಸ್ವಚ್ಛ ಮಾಡುವುದಕ್ಕೆ ಬಳಸಿ, ಅನಗತ್ಯವಾಗಿ ನೀರನ್ನು ಪೋಲು ಮಾಡಿದರೆ ನಿಯಮದ ಪ್ರಕಾರ ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಖಡಕ್​ ಎಚ್ಚರಿಕೆಯನ್ನು ನೀಡಿದೆ.

ಅಂದಹಾಗೆ, ಕೇವಲ ವಾಹನ ಸ್ವಚ್ಚತೆಗೆ ಮಾತ್ರವಲ್ಲ, ಕಟ್ಟಡ ನಿರ್ಮಾಣಕ್ಕೂ ಕಾವೇರಿ ನೀರನ್ನು ಬಳಸುವಂತಿಲ್ಲ. ಒಂದು ವೇಳೆ ನೀರು ಪೋಲು ಮಾಡಿದರೆ, ಅವರ ವಿರುದ್ಧ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ  ದಂಡವನ್ನು ವಿಧಿಸಲಾಗುತ್ತದೆ. ಒಂದು ವೇಳೆ ಉಲ್ಲಂಘನೆ ಮತ್ತೆ ಮರುಕಳಿಸಿದರೆ ದಂಡ ಮೊತ್ತ 5000 ಜೊತೆಗೆ ಹೆಚ್ಚುವರಿಯಾಗಿ 500 ರೂ. ದಂಡವನ್ನು ವಿಧಿಸಲಾಗುತ್ತದೆ.

ಇನ್ನು ಆಯುಧ ಪೂಜೆ ಹಬ್ಬದ ವೇಳೆ ಹೆಚ್ಚಿನ ಜನ ಕಾವೇರಿ ನೀರಿನಿಂದ ವಾಹನಗಳ ಸ್ವಚ್ಛತೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಹಬ್ಬದ ವೇಳೆ ಕಾವೇರಿ ನೀರಲ್ಲಿ ವಾಹನ ವಾಶ್ ಮಾಡಿದರೆ ದಂಡದ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷವೂ ದಂಡ ವಿಧಿಸಲಾಗಿತ್ತು.

Leave a Reply

Your email address will not be published. Required fields are marked *