BBMP
Loading ...

Sharanappa

Greater Bengaluru News9 : ಎಸ್ಕಾಂನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನದಂತಿದ್ದ ಸಿದ್ದಗಂಗಾ ಎಲೆಕ್ಟ್ರಿಲ್ಸ್​ನ ಶರಣಪ್ಪ ಅವರ ನಿಜ ಮುಖ ಬಟಾಬಯಲಾಗಿದೆ. ಶರಣಪ್ಪ ಓರ್ವ ಗೋಮುಖ ವ್ಯಾಘ್ರ ಎಂಬುದನ್ನು ಕೆ.ಆರ್.ಎಸ್. ಪಕ್ಷದ ಸೈನಿಕರು ಬಯಲು ಮಾಡಿದ್ದಾರೆ.

ವಿಡಿಯೋವೊಂದು ವೈರಲ್​ ಆಗಿದ್ದು, ಅದರ ಸಂಭಾಷಣೆಯಲ್ಲಿ ಗುತ್ತಿಗೆದಾರ ಎಂಬ ಲೋಕೇಶ್ ( ಕೆ. ಆರ್. ಎಸ್. ನ ಸೈನಿಕ ) ಹಾಗೂ ಪವರ್ ಮ್ಯಾನ್ ಎಂಬ ಮತ್ತೊಬ್ಬ ಸೈನಿಕ (ದೇವರಾಜ್ ) ರವರುಗಳನ್ನು ವಾಜರಹಳ್ಳಿಯ ಹೋಟೆಲ್​ಗೆ ಕರೆಸಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದ ಪಕ್ಷದಲ್ಲಿ ಲೋಕಾಯುಕ್ತ ಎಸ್. ಪಿ. ವಂಶಿ ಕೃಷ್ಣ ರವರಿಗೆ ಹೇಳಿ ತಕ್ಷಣ ಬಂಧಿಸುತ್ತೇನೆ ಎಂದು ಗೋಮುಖ ವ್ಯಾಘ್ರ ಶರಣಪ್ಪ ಧಮ್ಕಿ ಹಾಕಿರುತ್ತಾರೆ.

ಇದಿಷ್ಟೇ ಅಲ್ಲದೆ, ಸುಪರಿಡೆಂಟ್ ಇಂಜಿನಿಯರ್ ಚೇನ್ನಕೇಶವರೆಂದವರು ತಮ್ಮ ಅಕ್ರಮವನ್ನು ಮುಚ್ಚಿಹಾಕಲು ಒಂದು ಲಕ್ಷ ರೂಪಾಯಿ ನೀಡಿರುವುದನ್ನು ತಾವೇ ಒಪ್ಪಿಕೊಂಡಿದ್ದಾರೆ. ಇನ್ನೂ ಮುಂದೆ ಪವರ್ ಮ್ಯಾನ್‌ನ್ನು ಹೆದರಿಸಿ, ನೀನು ಮೌನವಾಗಿರದಿದ್ದರೆ ಡಿ.ಟಿ. ರಮೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಅವರನ್ನು ಕರೆಸಿ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ. ಲೋಕಾಯುಕ್ತರಿಂದ ಬಂಧಿಸಲ್ಪಡಿಸುತ್ತೇನೆ ಎಂದು ಬೆದರಿಕೆ ಹಾಕಿರುವುದು ಲಕ್ಷಾಂತರ ಕಾರ್ಮಿಕರ ಬೆವರು ಬಾಡಿಗೆ ತಿನ್ನುವ ಮಾನಹೀನ ಕೃತ್ಯವಾಗಿದೆ.

ಈ ರೀತಿ ಘೋರ ಕೃತ್ಯಗಳಿಂದ ಲೋಕಾಯುಕ್ತ ಸಂಸ್ಥೆಯ ಗೌರವಕ್ಕೂ ಮಸಿ ಬಡಿದ ಶರಣಪ್ಪನಂತಹ ಗುತ್ತಿಗೆದಾರರನ್ನು ಈಗ ಸಮಾಜ ಮುಂದೆ ಬಯಲಾಗಿಸುವ ಕೆಲಸವನ್ನು ನಮ್ಮ ಕೆ.ಆರ್.ಎಸ್. ಪಕ್ಷದ ದಿಟ್ಟ ಸೈನಿಕರು ಕೈಗೊಂಡಿದ್ದಾರೆ. ಇದೊಂದು ಆರಂಭ ಮಾತ್ರ. ಇವರು ಮಾಡಿದ ಪಾಪದ ಪ್ರತಿಯೊಂದು ಹೆಜ್ಜೆಯನ್ನು, ಪ್ರತಿಯೊಂದು ಅಕ್ರಮವನ್ನು ಜನ ಸಾಮಾನ್ಯರ ಮುಂದೆ ಎಳೆ ಎಳೆಯಾಗಿ ಹೊರತರುವ ಪವಿತ್ರ ಹೋರಾಟ ಮುಂದುವರಿಯುತ್ತದೆ. ಭ್ರಷ್ಟಾಚಾರದ ವಿರುದ್ಧದ ಕಾಳಗಕ್ಕೆ ಶಕ್ತಿ ನೀಡುವ ನಮ್ಮ ಸೈನಿಕರಿಗೆ ಶತಶಃ ಪ್ರಣಾಮಗಳು.

Leave a Reply

Your email address will not be published. Required fields are marked *