Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್.ವಿ. ಚಂದ್ರಬಾಬು ಅವರು EMINENT ENGINEER -2025 ಪ್ರಶಸ್ತಿಗೆ ಭಾಜನಾದರು.
ಕನ್ನಪ್ರಭ ಮತ್ತು ಸುವರ್ಣ ನ್ಯೂಸ್ ವತಿಯಿಂದ ಸೆಪ್ಟೆಂಬರ್ 27ರ ಶನಿವಾರದಂದು ಇಂಜಿನಿಯರ್ ಕ್ಷೇತ್ರದ ಅಪ್ರತಿಮ ಸಾಧಕರಿಗೆ EMINENT ENGINEER -2025 ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯುತ್ ಗುತ್ತಿಗೆದಾರರ ಸಂಘದ ನೆಚ್ಚಿನ ಗೌರವ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಎಚ್.ವಿ. ಚಂದ್ರಬಾಬು ಅವರು ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ಹಸ್ತದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಪಡೆದ ಚಂದ್ರಬಾಬು ಅವರಿಗೆ ಸಂಘದ ಕೇಂದ್ರ ಸಮಿತಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.



