Greater Bengaluru News9 : ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ 12’ ಸೆಪ್ಟೆಂಬರ್ 28ರಿಂದ ಪ್ರಾರಂಭವಾಗಲಿದೆ. ಈ ನಡುವೆ ಶೋಗೆ ಸಂಬಂಧಿಸಿದ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಆಗಿರುವ ಪಟ್ಟಿಯಲ್ಲಿ ಜನಪ್ರಿಯ ನಟ ವಿಜಯ್ ಸೂರ್ಯ, ರಾಧಾ ರಮಣ ಖ್ಯಾತಿಯ ನಟಿ ಶ್ವೇತಾ ಪ್ರಸಾದ್, ಸತ್ಯ ಧಾರಾವಾಹಿ ಮೂಲಕ ಮನೆಮಾತಾದ ಸಾಗರ್ ಬಿಲ್ಲಿಗೌಡ, ನಟಿ ದಿವ್ಯಾ ವಸಂತ್, ಚಂದನವನದ ಸುಂದರಿ ಮೇಘಾ ಶೆಟ್ಟಿ ಸೇರಿ ಹಲವರ ಹೆಸರು ಕೇಳಿಬಂದಿದೆ.
ಇದೇ ಪೈಕಿ ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್, ಯೂಟ್ಯೂಬರ್ ಪಾಯಲ್ ಚೆಂಗಪ್ಪ, ವರುಣ್ ಆರಾಧ್ಯ, ಗಗನ ಭಾರಿ ಹಾಗೂ ಗಾಯಕ ಸುನೀಲ್ ಹೆಸರುಗಳೂ ಪಟ್ಟಿಯಲ್ಲಿ ಸೇರಿವೆ.
ಆದರೆ ಈ ಪಟ್ಟಿ ಅಧಿಕೃತವಲ್ಲ. ಕಾರ್ಯಕ್ರಮ ಪ್ರಾರಂಭದ ದಿನ ನಿಜವಾದ ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಇಷ್ಟರಲ್ಲೇ ಅಭಿಮಾನಿಗಳು ತಮ್ಮ ತಮ್ಮ ಫೇವರಿಟ್ ಸ್ಟಾರ್‌ಗಳಿಗಾಗಿ ಊಹಾಪೋಹಗಳಲ್ಲಿ ತೊಡಗಿದ್ದಾರೆ. ಈ ಸೀಸನ್‌ನಲ್ಲಿ ಯಾವ ತಾರೆಯರು ಮನೆ ಸೇರ್ತಾರೆ ಅನ್ನೋದು ಈಗಲೇ ಕುತೂಹಲ ಕೆರಳಿಸಿದೆ.


