BBMP
Loading ...

Greater Bengaluru News9

Greater Bengaluru News9 : ನಗರದಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿರುವ ಕಾರಣ, ಒಂದು ತಿಂಗಳಲ್ಲಿ ಮುಚ್ಚಬೇಕು. ಒಂದು ವೇಳೆ ಮುಚ್ಚದೇ ಇದ್ದರೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲಾ ಚೀಫ್ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡುವುದಾಗಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚೋ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಜಿಬಿಎ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಗರಂ ಆದ ಘಟನೆಯೂ ನಡೆಯಿತು. ಇಂಜಿನಿಯರ್ ಗಳ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಟ ಎಂಬುದಾಗಿ ಗರಂ ಆದರು.

ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಟ? ನಾಚಿಕೆ ಆಗುವುದಿಲ್ಲವೇ ನಿಮಗೆ? ಮುಚ್ಚಿರುವ ಗುಂಡಿಗಳು ನೆಟ್ಟಗಿಲ್ಲ ಜನರ ಕಷ್ಟ ಗೊತ್ತಾಗಲ್ವಾ?ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ನಿಮ್ಮನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಬೇಕಾಗುತ್ತದೆ. ಗುಂಡಿ ಮುಚ್ಚದಿದ್ದರೆ ಎಲ್ಲಾ ಚೀಫ್ ಇಂಜಿನಿಯರ್ಗಳನ್ನ್ ಸಸ್ಪೆಂಡ್ ಮಾಡುತ್ತೇನೆ. ಪ್ರತಿ ಸಲ ಮಳೆ ಬಂದಾಗಲೂ ಇದೆ ಸಮಸ್ಯೆ ಆಗುತ್ತದೆ.

ಹಾಕಿದ ರಸ್ತೆ ಅಷ್ಟು ಬೇಗ ಹಾಳಾಗುತ್ತೆ ಅಂದರೆ ಏನ್ರೀ ಮಾಡುತ್ತೀರಾ? ಸ್ವಲ್ಪ ಮಳೆಯಾದರೂ ರಸ್ತೆಯಲ್ಲಿ ಗುಂಡಿಗಳು ಬೀಳುತ್ತವೆ ಪದೇ ಪದೇ ಜನ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಾರೆ. ನಾನು ಯಾರ ಮುಖ ನೋಡುವುದಿಲ್ಲ ತಲೆದಂಡ ಖಚಿತ ಹಿರಿಯ ಅಧಿಕಾರಿಗಳ ತಲೆದಂಡವು ಖಚಿತ. ಇದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *