BBMP
Loading ...

Namma Metro

Greater Bengaluru News9 : ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಫೇಸ್ 3 ಯೋಜನೆ 2031ರ ಮೇಗೆ ಪೂರ್ಣಗೊಳ್ಳಲಿದೆ, ಡಬಲ್-ಡೆಕ್ಕರ್ ಫ್ಲೈಓವರ್ ವಿನ್ಯಾಸ ಬದಲಾವಣೆಗಳಿಂದ ಕಾಮಗಾರಿ ವಿಳಂಬವಾಗಿದೆ. ಬಿಎಂಆರ್​​ಸಿಎಲ್ ಅಧಿಕಾರಿಗಳ ಮಾಹಿತಿಯ ಅನ್ವಯ, ಫೇಸ್​​​ 3ನಲ್ಲಿ ಎರಡು ಕಾರಿಡಾರ್​ ಗಳನ್ನ ಒಳಗೊಂಡಿದ್ದು, ಜೆಪಿ ನಗರ ಫೇಸ್​ 4ರಿಂದ ಕೆಂಪಾಪುರ ವರೆಗೂ ಮೊದಲ ಕಾರಿಡಾರ್ 32.15 ಕಿಮೀ ದೂರವಿದೆ. ಕಾರಿಡಾರ್​ 2 ಹೊಸಹಳ್ಳಿಯಿಂದ ಕಡಬಗೆರೆ ವರೆಗೂ 12.5 ಕಿಮೀ ದೂರವಿದೆ.

ಬೆಂಗಳೂರಿನ ಮಹತ್ವಾಕಾಂಕ್ಷೆಯ ನಮ್ಮ ಮೆಟ್ರೋದ 3ನೇ ಹಂತ ಅಥವಾ ಆರೆಂಜ್ ಲೈನ್ ಕನಿಷ್ಠ ಒಂದು ವರ್ಷ ವಿಳಂಬವಾಗಬಹುದು. ಏಕೆಂದರೆ ಬಿಎಂಆರ್​ಸಿಎಲ್ ಕೆಲವೊಂದು ಭಾಗಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ವಿನ್ಯಾಸದಲ್ಲಿ ಈ ಬದಲಾವಣೆ ಮಾಡಲು ಯೋಜನ ಬೆಚ್ಚದಲ್ಲಿ ಶೇಕಡಾ 5ರಷ್ಟು ವೆಚ್ಚ

2025ರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಆರ್​​ವಿ ರೋಡ್ ನಿಂದ ಬೊಮ್ಮಸಂದ್ರ ವರೆಗಿನ ಮಾರ್ಗವನ್ನು ಪ್ರಾರಂಭಿಸಿದ್ದ ಪ್ರಧಾನಿಗಳು ಅದೇ ದಿನ ಫೇಸ್ 3ಗೆ ಫೌಂಡೇಶನ್ ಹಾಕಿದ್ದರು. ಈ ಯೋಜನೆಗೆ 15,611 ಕೋಟಿ ರೂಪಾಯಿ ವೆಚ್ಚ ಆಗಲಿದೆ.

ಫೇಸ್ 3 ಸುಮಾರು 44 ಕಿಮೀ ದೂರವನ್ನು ಹೊಂದಿದ್ದು, 31 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿರಲಿದೆ. ಬೆಂಗಳೂರಿನ ಬೆಳೆಯುತ್ತಿರುವ ವಸತಿ, ಕೈಗಾರಿಕಾ, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರಗಳಿಗೆ ಸೇವೆ ಸಲ್ಲಿಸಲು ಇದನ್ನು ಕಲ್ಪಿಸಲಾಗಿದೆ. ಈ ಯೋಜನೆಯು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಮೊದಲನೆಯದು ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಮತ್ತು ಎರಡನೆಯದು ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ಉದ್ದವಿದೆ.

ಆಗಸ್ಟ್ 2024ರಲ್ಲಿಯೇ ಕೇಂದ್ರ ಕ್ಯಾಬಿನೆಟ್‌ನಿಂದ ಮಂಜೂರಾತಿ ಹಾಗೂ ಎಲ್ಲಾ ಅನುಮೋದನೆಗಳನ್ನು ಪಡೆದ ಬಳಿಕವೂ ಕಾಮಗಾರಿ ವಿಳಂಬವಾಗುತ್ತಿದೆ. ಡಬಲ್-ಡೆಕ್ಕರ್ ವಯಾಡಕ್ಟ್‌ಗೆ ಅಗತ್ಯವಾದ ವಿನ್ಯಾಸ ಬದಲಾವಣೆಗಳೇ ಈ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿನ್ಯಾಸ ಬದಲಾವಣೆಗಳಿಂದಾಗಿ ಸ್ಟೇಷನ್ ನಿರ್ಮಾಣಕ್ಕೆ ಸುಮಾರು ಶೇಕಡಾ 25ರಷ್ಟು ಭೂಮಿ ಹೆಚ್ಚು ಅಗತ್ಯವಿದೆ. ಏಕೆಂದರೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣದಿಂದ ಈ ಹಿಂದಿನ ಪ್ಲ್ಯಾನ್ ಗಿಂತಲೂ ಮೆಟ್ರೋ ಹಳಿ ಎತ್ತರ ಹೆಚ್ಚಾಗಲಿದ್ದು, ಈ ಸಮಸ್ಯೆ ಪರಿಹಾರವನ್ನು ಕಂಡುಕೊಳ್ಳಲು ಹೆಚ್ಚಿನ ಭೂಮಿ ಅಗತ್ಯವಿದೆ.

ಈ ಕಾರಣದಿಂದ ಫೇಸ್​ 3 ಯೋಜನೆಗೆ ಈ ಮೊದಲು ನೀಡಿದ್ದ 2029ರ ಡೆಡ್ ಲೈನ್ ಬದಲು, 2030ರ ಒಳಗೆ ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿತ್ತು. ಆದರೆ ಯೋಜನೆಯ ವಿನ್ಯಾಸ ಬದಲಾವಣೆ ಆಗಿರುವ ಕಾರಣ ಈ ಗಡುವನ್ನು 2031ರ ಮೇಗೆ ವಿಸ್ತರಿಸಲಾಗಿದೆ. ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು ಐದೂವರೆ ವರ್ಷಗಳು ಬೇಕಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಫೇಸ್ 3ರ ಕೆಲವು ಭಾಗಗಳಲ್ಲಿ ಡಬಲ್-ಡೆಕ್ಕರ್ ಫ್ಲೈಓವರ್‌ಗಳನ್ನು ಸೇರಿಸಲಾಗುತ್ತಿದೆ, ಇದರಿಂದ ಭವಿಷ್ಯದಲ್ಲಿ ಎದುರಾಗ ಬಹುದಾದ ಸಂಚಾರ ದಟ್ಟಣೆಯನ್ನು ತಗ್ಗಿಸಲು ಸಹಾಯವಾಗುತ್ತದೆ. ಮತ್ತು ಮೆಟ್ರೋ ನಿರ್ಮಾಣದ ಜಾಗವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಹಾಯವಾಗಲಿದೆ. ಆದರೆ, ಈ ನಿರ್ಮಾಣಕ್ಕೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯಕ್ಕಿಂತ ಇಂದು ವರ್ಷ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಹಿರಿಯ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *