BBMP
Loading ...

BNG

Greater Bengaluru News9 : ಒಸಿ, ಸಿಸಿಯಿಂದ ವಿನಾಯ್ತಿ ನೀಡಲಾಗಿದೆ ಎಂದು ಕಟ್ಟಡವನ್ನು ಬೇಕಾಬಿಟ್ಟಿಯಾಗಿ ಕಟ್ಟುವ ಹಾಗಿಲ್ಲ. ಹಾಗೇನಾದರೂ ಕಟ್ಟಿದರೆ ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡಲು ಹೊಸದಾಗಿ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.

ಜಿಬಿಎ ಅಡಿಯಲ್ಲಿ ಇದಕ್ಕಾಗಿಯೇ ಪ್ರತ್ಯೇಕವಾದ ಟಾಸ್ಕ್ ಫೋರ್ಸ್ ರಚಿಸಲು ನಿರ್ಧರಿಸಲಾಗಿದೆ. ಆ ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾಲಾನುಕ್ರಮಕ್ಕೆ ಪ್ರತಿಯೊಂದು ಬಡಾವಣೆಯ ಪ್ರತಿಯೊಂದು ಮನೆಗೂ ಬಂದು ಕಟ್ಟಡದ ಪ್ಲ್ಯಾನಿಂಗ್ ಗೆ ಅನುಗುಣವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆಯೇ, ಕಟ್ಟಡವು ವಾಸಿಸಲು ಯೋಗ್ಯವಾಗಿದೆಯೇ ಹಾಗೂ ಕಟ್ಟಡದ ಮಾಲೀಕರು ಕಟ್ಟಡ ನಿರ್ಮಾಣ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿಯನ್ನು ಒತ್ತುವರಿ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಪ್ಲ್ಯಾನಿಂಗ್ ಗೆ ವಿರುದ್ಧವಾಗಿ ನಿರ್ಮಾಣವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ.

ಕರ್ನಾಟಕದಲ್ಲಿ 1,200 ಚದುರಡಿ ವಿಸ್ತೀರ್ಣವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (O.C.) ಹಾಗೂ ನಿರ್ಮಾಣ ಮುಕ್ತಾಯ ಪ್ರಮಾಣಪತ್ರ (C.C) ಕಡ್ಡಾಯ ಎಂಬ ನಿಯಮದಿಂದ ವಿನಾಯ್ತಿ ನೀಡಲಾಗಿದ್ದು, ಅದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಸುಮಾರು 33 ಸಾವಿರ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕದ ಅನುಕೂಲ ಸಿಗುವ ಸಾಧ್ಯತೆಗಳಿವೆ.

ಇದೇ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ನಿಂದ ಸಿಸಿ, ಒಸಿ ಬಗ್ಗೆ ಒಂದು ಆದೇಶ ಹೊರಬಿದ್ದಿತ್ತು. ಅದರಲ್ಲಿ ಸ್ವಾಧೀನ ಪ್ರಮಾಣಪತ್ರ ಹಾಗೂ ನಿರ್ಮಾಣ ಮುಕ್ತಾಯ ಪ್ರಮಾಣಪತ್ರಗಳನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕೊಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ 1,200 ಚದುರಡಿ ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗೆ ಈ ಎರಡೂ ಪ್ರಮಾಣಪತ್ರಗಳಿಂದ ವಿನಾಯ್ತಿ ಘೋಷಿಸಿರುವುದರಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹಾಗೂ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಲ್ಲಿ (ಬಿಡಬ್ಲ್ಯೂಎಸ್ಎಸ್ ಬಿ) ಕ್ರಮವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕಾಗಿ ಸಲ್ಲಿಸಲಾಗಿದ್ದ CC ಹಾಗೂ OC ಪ್ರಮಾಣಪತ್ರಗಳಿಲ್ಲದ ಸಾವಿರಾರು ಅರ್ಜಿಗಳಿಗೆ ಈಗ ಮುಕ್ತಿ ಸಿಗುವ ವಿಶ್ವಾಸ ಮೂಡಿದೆ.

Leave a Reply

Your email address will not be published. Required fields are marked *