ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿದ್ದು, ವಾಹನ ಮಾಲೀಕರು ಈ ಆಫರ್ ಅನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಇದೆ ಫೈನ್ ಕಟ್ಕೊಳಿ ಸಿಎಂ ಸಾಹೇಬ್ರೆ ಅಂತ ಸಿಎಂ ಗೌರ್ನಮೆಂಟ್ ಕಾರ್ ಮೇಲೆ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ಗಳ ದಾಖಲೆ ಸಮೇತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬರೋಬ್ಬರಿ 2000 ₹ ಟ್ರಾಫಿಕ್ ಫೈನ್ ಅಮೌಂಟ್ ಸಿಎಂ ಕಾರ್ ಮೇಲಿದ್ದು,ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಕಾರ್ ಫೋಟೊ ಹಾಕಿ ಫೈನ್ ಕಟ್ಟುವಂತೆ ಸಾರ್ವಜನಿಕರು ಸೂಚನೆ ನೀಡಿದ್ದಾರೆ. ಕೆಎ 05 GA 2023 ಕಾರಿನ ಮೇಲೆ ಬರೋಬ್ಬರಿ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ಇದ್ದು, ಸದ್ಯ ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಇದೆ ಫೈನ್ ಕಟ್ಕೊಳಿ ಸಿಎಂ ಅಂತಾ ಹೇಳಿದ್ದಾರೆ. ಸೀಟ್ ಬೆಲ್ಟ್ ಹಾಗು ಓವರ್ ಸ್ಪೀಡ್ ಫೈನ್ ಕೇಸ್ ದಾಖಲಾಗಿದೆ.


