ಬೆಂಗಳೂರು:- ಬೆಂಗಳೂರು ಸಂಚಾರ ಪೊಲೀಸರಿಂದ ಟ್ರಾಫಿಕ್ ಫೈನ್ ಕಟ್ಟಲು 50% ರಿಯಾಯಿತಿ ನೀಡಿರುವುದಕ್ಕೆ ಸವಾರರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರು. ಬೆಂಗಳೂರಿನಲ್ಲಿ ಬಾಕಿ ಉಳಿದಿದ್ದ ದಂಡ ವಸೂಲಿಗೆ ಪೊಲೀಸ್ ಇಲಾಖೆ 50% ರಿಯಾಯಿತಿ ನೀಡಿದೆ. ಸದ್ಯ ಇದಕ್ಕೆ ಸವಾರರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿದ್ದು, ವಾಹನ ಮಾಲೀಕರು ಈ ಆಫರ್ ಅನ್ನು ಭರ್ಜರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂಕರವೆಂಬಂತೆ ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ ಬರೋಬ್ಬರಿ 21 ಕೋಟಿ 86 ಸಾವಿರ ರೂ. ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 50% ಡಿಸ್ಕೌಂಟ್ ಆಫರ್ ಶುರುವಾದ ಒಂದು ವಾರದೊಳಗೆ ಅಂದ್ರೆ ಆಗಸ್ಟ್ 23ರಿಂದ ಆಗಸ್ಟ್ 29ರವರೆಗೆ 7,43,160 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವರಿಸಿದ್ದಾರೆ.
ಆಗಸ್ಟ್ 21ರಂದು ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.
ಬೆಂಗಳೂರು ವ್ಯಾಪ್ತಿಗೆ ಮಾತ್ರ ಈ ಡಿಸ್ಕೌಂಡ್ ನೀಡಿದ್ದು, ವಾಹನ ಸವಾರರ ರಿಯಾಕ್ಷನ್ ನೋಡಿಕೊಂಡು ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕೇ ಬೇಡವೇ ಅನ್ನೋದು ತೀರ್ಮಾನ ಮಾಡುವ ಸಾಧ್ಯತೆ ಇದೆ. ಇನ್ನೂ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದೆ.


