BBMP
Loading ...

Traffic Police

ಬೆಂಗಳೂರು: 2023ರಲ್ಲಿ ನೀಡಿದಂತೆ ಈ ಬಾರಿಯೂ ಕರ್ನಾಟಕ ಸಾರಿಗೆ ಇಲಾಖೆ ಟ್ರಾಫಿಕ್ ಫೈನ್​ಗೆ ಶೇ 50 ರಿಯಾಯಿತಿ ನೀಡಿ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಸೈಬರ್‌ ಖದೀಮರು ನಿಮ್ಮ ಹಣವನ್ನೇ ದೋಚಲು ಮುಂದಾಗಿದ್ದಾರೆ.

ಹೌದು ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ನಂಬರ್‌ಗಳಿಗೆ ಕೆಲ ಲಿಂಕ್‌ಗಳು, ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಹನಗಳ ದಂಡವನ್ನು ಚೆಕ್‌ ಮಾಡಿಕೊಳ್ಳಿ. ಹಾಗೆಯೇ ಇಲ್ಲೇ ದಂಡ ಕಟ್ಟಬಹುದು ಎಂಬ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದಾರೆ.

ವಂಚಕರ ಮೆಸೇಜ್‌ಗಳನ್ನು ನಂಬಿದ ಹಲವರು ಅದನ್ನು ಓಪನ್ ಮಾಡಿದ ತಕ್ಷಣ ಅಕೌಂಟ್ ನಲ್ಲಿದ್ದ ಹಣ ಮಾಯವಾಗುತ್ತದೆ. ಕೊಡಿಗೇಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರಿಗೆ ಸೈಬರ್ ವಂಚಕರು ಓಪನ್ ಮಾಡಿ ನಿಮ್ ವಾಹನದ ಫೈನ್ ಎಷ್ಟಿದೆ ಚೆಕ್ ಮಾಡಿಕೊಳ್ಳಿ ಅಂತಾ ಎಪಿಕೆ ಫೈಲ್‌ ಕಳುಹಿಸಿದ್ದರು.

ಆ ಮಸೇಜ್ ನಂಬಿದ ಟೆಕ್ಕಿ ಆ ಲಿಂಕ್ ನ ಓಪನ್ ಮಾಡಿದ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮುರಳಿ ದೂರು ನೀಡಿದ್ದಾರೆ.

ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಬಹುದು. ಹಲವು ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಉಳಿಸಿಕೊಂಡವರಿಗೆ ಈ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಮೊತ್ತದ ದಂಡ ಸಂಗ್ರಹಿಸಿತ್ತು. ಈ ಆದೇಶದಂತೆ ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

Leave a Reply

Your email address will not be published. Required fields are marked *