BBMP
Loading ...

Ganesha Festival 1

ಬೆಂಗಳೂರು: ಗೌರಿ, ಗಣೇಶ – ಈದ್ ಮಿಲಾದ್ ಹಬ್ಬದ ಹಿನ್ನೆಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಶಾಂತಿ ಸಭೆ ನಡೆಸಲಾಗಿದೆ. ಹಬ್ಬಗಳ ಆಯೋಜಕರು, ಎರಡು ಕೋಮುಗಳ ಮುಖಂಡರ ಜತೆ ಸಭೆ ಮಾಡಲಾಗಿದ್ದು, ಗಣೇಶೋತ್ಸವ, ಈದ್ ಮಿಲಾದ್ ಆಚರಣೆ ನಿಯಮಗಳ ಪಾಲನೆಗೆ ಸೂಚಿಸಲಾಗಿದೆ.

ಉತ್ಸವಗಳು, ಮೆರವಣಿಗೆಗಳಿಗೆ ನಿಗಧಿತ ರಸ್ತೆಗಳ ಸೂಚಿಸಿಲಾಗಿದ್ದು,, ಭದ್ರತಾ ದೃಷ್ಟಿಯಿಂದ ಆ ನಿಗದಿತ ರಸ್ತೆಗಳಲ್ಲಿ ಸಿಟಿವಿಗಳ ಅಳವಡಿಕೆಗೆ ಸೂಚಿಸಲಾಗಿದೆ. ಮೆರವಣಿಳೆ ವೇಳೆ ಕೋಮುಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗಬಾರದು. ಬ್ಯಾನರ್, ಫ್ಲೆಕ್ಸ್ ಗಳನ್ನು ಅನುಮತಿ ಪಡೆಯಬೇಕೆಂದು ಪೋಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ಗಣೇಶ, ಈದ ಮಿಲಾದ್ ಹಬ್ಬಗಳ ಹಿನ್ನೆಲೆ ಶಾಂತಿ ಸಭೆ ಮಾಡಲಾಗಿದೆ. ಪ್ರತಿ ಪೊಲೀಸ್ ಠಾಣೆಗಳ ಲಿಮಿಟ್ಸ್ ನಲ್ಲಿ ಶಾಂತಿ ಸಭೆ ನಡೀತಿದೆ.

ಬಿಬಿಎಂಪಿ ಜೊತೆಗೂಡಿ ರೂಟ್ ಗಳನ್ನ ಪರಿಶೀಲನೆ ಮಾಡ್ತಿದ್ದಾರೆ. ಗಣೇಶ ಮೆರವಣಿಯ ಸೂಕ್ಷ ರೂಟ್ ಗಳಲ್ಲಿ ಪರಿಶೀಲನೆ ಮಾಡ್ತಿದ್ದಾರೆ. ಟ್ಯಾನರಿ ರೋಡ್ ಗೆ ಖುದ್ದಾಗಿ ನಾನೇ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಭದ್ರತಾ ದೃಷ್ಟಿಯಿಂದ ನಮ್ಮವರು ಎಲ್ಲಾ ಸಿದ್ದತೆ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ನಿಗಾ ಇಡಲಾಗಿದೆ ಎಂದರು.

Leave a Reply

Your email address will not be published. Required fields are marked *