ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಗೆ ಮತ್ತೊಂದು ಬಲಿಯಾಗಿದೆ. ಹೌದು ಬಿಎಂಟಿಸಿ ಬಸ್ನಡಿ ಸಿಲುಕಿ 10 ವರ್ಷದ ಪುಟ್ಟ ಕಂದಮ್ಮ ಸಾವನಪ್ಪಿದ ಘಟನೆ ಇಂದು ಮುಂಜಾನೆ ಯಲಹಂಕ ಕೋಗಿಲು ಕ್ರಾಸ್ ಬಳಿಯ ಮಾರುತಿನಗರದಲ್ಲಿ ನಡೆದಿದೆ.
ಮಿಲಿಯನಿಯಂ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ತನ್ವೀ ಕೃಷ್ಣ ತನ್ನ ತಾಯಿ ಹರ್ಷಿತಾ ಜೊತೆ ದ್ವಿಚಕ್ರ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ರಸ್ತೆಯಲ್ಲಿ ಸ್ಕಿಡ್ ಆಗಿದ್ದು, ಬಾಲಕಿ ತನ್ವೀ ಕೃಷ್ಣ ರಸ್ತೆಗೆ ಬಿದ್ದಿದ್ದಾಳೆ. ತಕ್ಷಣ ಹಿಂದಿನಿಂದ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಬಾಲಕಿ ತಲೆ ಮೇಲೆ ಹರಿದಿದೆ.
ಬಿಎಂಟಿಸಿ (ನೋಂದಣಿ ಸಂಖ್ಯೆ: KA57 F:5375) ನ ಬಸ್ ಇದಾಗಿದೆ. ತನ್ವೀ ಸ್ಥಳದಲ್ಲೇ ಸಾವನ್ನಪ್ಪಿದ್ದಳೆ. ತಾಯಿ ಹರ್ಷಿತಾ ಮತ್ತು ಜೊತೆಗಿದ್ದ ಮತ್ತೊಂದು ಮಗುವಿಗೆ ಯಾವುದೇ ಅಪಾಯ ಆಗಿಲ್ಲ, ಆದರೆ ತಮ್ಮ ಮಗುವನ್ನು ಕಣ್ಣೆದುರೇ ಕಳೆದುಕೊಂಡು ತಾಯಿ ಗೋಳಾಡಿದ್ದಾರೆ.ಸ್ಥಳೀಯರು ಬಸ್ ಚಾಲಕರ ನಿರ್ಲಕ್ಷ್ಯವೆಂದು ದೂರಿದ್ದು, ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


