BBMP
Loading ...

Strike

ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಮುಗಿ ಬಿದ್ದಿರುವ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

ರಾಜ್ಯದಾದ್ಯಂತ ಸರಕಾರಿ ಬಸ್ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರಿಗೆ ಬೆಳಗ್ಗೆಯಿಂದ ಬಿಸಿ ತಟ್ಟಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಸೇರಿದಂತೆ ನಾಲ್ಕೂ ನಿಗಮಗಳ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಮಂಡ್ಯ, ಹುಬ್ಬಳ್ಳಿ, ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಬೆಳಗ್ಗೆಯೇ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಮೈಸೂರಿನಲ್ಲಿ ಬೆರಳೆಣಿಗೆ ಬಸ್‌ಗಳ ಓಡಾಟ ಇದೆ. ಖುದ್ದು ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ಬಸ್ ಒದಗುವಂತೆ ಮಾಡುತ್ತಿದ್ದಾರೆ. ರಾತ್ರಿ ಪಾಳಿಯ ನೌಕರರಷ್ಟೇ ಕೆಲಸ ಮುಂದುವರಿಸಿದ್ದಾರೆ. ಶಾಂತಿನಗರ, ಮೆಜೆಸ್ಟಿಕ್ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಬಸ್ ಪಾಸ್ ಪಡೆದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಆದ್ರೆ, ಬೆಳಗ್ಗೆ 4.30ಕ್ಕೆ ಕೆಲ ಬಸ್​ಗಳು ನಗರದಲ್ಲಿ ಸಂಚಾರ ಆರಂಭಿಸಿತು. ಮೆಜೆಸ್ಟಿಕ್, ಶಾಂತಿನಗರ, ಕೆ.ಆರ್​ ಮಾರ್ಕೆಟ್​ನಲ್ಲಿ ಬಿಎಂಟಿಸಿ ಬಸ್​ಗಳು ಸಂಚಾರ ನಡೆಸುತ್ತಿದ್ದವು. ಮೆಜೆಸ್ಟಿಕ್, ಶಾಂತಿನಗರ, ಕೆ.ಆರ್​ ಮಾರ್ಕೆಟ್​ನಲ್ಲಿ ಬಿಎಂಟಿಸಿ ಬಸ್​ಗಳು ಸಂಚಾರ ನಡೆಸುತ್ತಿದ್ದವು. ಸದ್ಯ ರಾತ್ರಿ ಪಾಳಿ ಬಿಎಂಟಿಸಿ ಬಸ್​​ಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಬೆಳಗಿನ ಪಾಳಿಯ ಬಸ್​ಗಳು ಸಂಚಾರ ಮಾಡೋದು ಬಹುತೇಕ ಅನುಮಾನ ಇದೆ. ಹೀಗಾಗಿ ಕೆಲ ಕಂಡಕ್ಟರ್ ಹಾಗೂ ಡ್ರೈವರ್​ಗಳು ಕರ್ತವ್ಯಕ್ಕೆ ಬ್ರೇಕ್​ ಆಗೋ ಎಲ್ಲಾ ಸಾಧ್ಯತೆಗಳಿವೆ.

ಇನ್ನೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಇಂದು ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ನಡೆಸುತ್ತಾರೆ ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಸೋಮವಾರ ಹೇಳಿದ್ದಾರೆ. ಹೀಗಾಗಿ ಪ್ರಯಾಣಿಕರು ಇಂದು ಬಸ್ ಇಲ್ಲದೇ ಪರದಾಡೋದು ಪಕ್ಕಾ ಎನ್ನಲಾಗುತ್ತಿದೆ.

ಕನ್ನಡ ರಾಜ್ಯೋತ್ಸವದ ಒಳಗೆ ಬಿಬಿಎಂಪಿ ವಾರ್ಡ್ ಪುನರ್​​ ವಿಂಗಡಣೆ ಪೂರ್ಣಗೊಳಿಸಿ: ಸುಪ್ರೀಂ ಕೋರ್ಟ್​

Leave a Reply

Your email address will not be published. Required fields are marked *