BBMP
Loading ...

Anushree

ಬೆಂಗಳೂರು : ಕನ್ನಡದ ಹೆಸರಾಂತ ಆ್ಯಂಕರ್ ಆಗಿರುವ ಯಾವುದೇ ವೇದಿಕೆ ಇರಲಿ ಯಾವುದೇ ಸಭೆ ಸಮಾರಂಭಗಳಿರಲಿ ನಿರರ್ಗಳವಾಗಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಸುಲಲಿತವಾಗಿ ಮಾತನಾಡುವಂತಹ ಆ್ಯಂಕರ್ ಅನುಶ್ರೀ ಅವರು ತಮ್ಮ ಅಭಿಮಾನಿಗಳಿಗೆ ಕೊನೆ ಕೊನೆಗೂ ಸಿಹಿಸುದ್ದಿ ನೀಡಿದ್ದು, ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ.

ಹೌದು ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.

ಪ್ರಸಿದ್ಧ ಕನ್ನಡ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಈಗ ಅಧಿಕೃತವಾಗುತ್ತಿದೆ. ಆಗಸ್ಟ್ 28ಕ್ಕೆ ಅವರ ವಿವಾಹ ನಡೆಯಲಿದೆ ಎಂದು ವರದಿಗಳಿವೆ. ಬೆಂಗಳೂರಿನ ಕಾರ್ಪೋರೇಟ್ ಉದ್ಯೋಗಿಯೊಂದಿಗೆ ಅವರ ವಿವಾಹ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನುಶ್ರೀ ಅವರು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆಯೂ ಹಲವಾರು ಬಾರಿ ಅನುಶ್ರೀಯವರ ಮದುವೆ ಎಂದು ಸುದ್ದಿ ಹರಿದಾಡಿತ್ತು ಆದರೆ ಇದೀಗ ಅಧಿಕೃತವಾಗಿ ವರದಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಅನುಶ್ರೀ ಅವರೇ ಸ್ಪಷ್ಟನೆ ನೀಡಬೇಕಿದೆ.

1600 ಕೋಟಿ ಆಸ್ತಿಯಲ್ಲಿ ಚಿಕ್ಕಪೇಟೆ ಜನರಿಗೆ ಅರ್ಧ ಪಾಲು ಕೊಡ್ತೀನಿ ಹೊರತು ಮಗನಿಗೆ ಕೊಡಲ್ಲ: ಕೆಜಿಎಫ್​ ಬಾಬು

Leave a Reply

Your email address will not be published. Required fields are marked *