BBMP
Loading ...

BESCOM

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಹಾಯಕ ಎಂಜಿನಿಯರ್ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಲೋಕಾಯುಕ್ತ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

‘ನನ್ನ ವಿರುದ್ಧ ಬೆಂಗಳೂರು ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ ಎನ್‌.ಎಚ್‌.ಯತೀಶ್‌ ಪಾಳೇಗಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

‘ಪ್ರಕರಣವನ್ನು ಗಮನಿಸಿದಾಗ ಅರ್ಜಿದಾರ ಯತೀಶ್‌ (ಕ್ಷೇತ್ರ ಪಾಲನೆ ಮತ್ತು ನಿರ್ವಹಣೆ ವಿಭಾಗ) ಪ್ರಾಥಮಿಕವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗುತ್ತದೆ ಮತ್ತು ಹಣವನ್ನು ದೂರುದಾರರಿಂದ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ, ಲಂಚಕ್ಕೆ ಬೇಡಿಕೆ ಇರಿಸಿರುವ ಮತ್ತು ಪಡೆಯುವ ಬಗ್ಗೆಗಿನ ಅಂಶಗಳು ಮೇಲ್ನೋಟಕ್ಕೆ ಮನದಟ್ಟಾಗುವಂತಿವೆ’ ಎಂಬ ಅಭಿ‍ಪ್ರಾಯದೊಂದಿಗೆ ನ್ಯಾಯಪೀಠ ತನಿಖೆ ಮುಂದುವರಿಸಲು ಹಸಿರು ನಿಶಾನೆ ತೋರಿದೆ.

ತಾವರೆಕೆರೆಯಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವ: ನಂಜಾವಧೂತ ಶ್ರೀಗಳಿಂದ ಆಶೀರ್ವಚನ

Leave a Reply

Your email address will not be published. Required fields are marked *