ಬೆಂಗಳೂರು: ಮೂರು ವರ್ಷಗಳ ಬಳಿಕ ರಾಜಧಾನಿಯಲ್ಲಿ ಟೋಯಿಂಗ್ ಮರುಜಾರಿಗೆ ಹಲವು ಸಭೆಗಳನ್ನ ರಾಜ್ಯ ಸರ್ಕಾರ ಚರ್ಚೆ ನಡೆಸಿದರೂ ಒಮ್ಮತದ ನಿರ್ಧಾರದ ಬಗ್ಗೆ ಜಿಜ್ಞಾಸೆ ಮೂಡಿದ ಪರಿಣಾಮ ಸದ್ಯಕ್ಕೆ ಟೋಯಿಂಗ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದಾಗಿ ನಗರದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮುಖ್ಯವಾಗಿ ಪೀಕ್ ಅವರ್ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸವಾರರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಟೋಯಿಂಗ್ ಮತ್ತೆ ಆರಂಭಿಸುವುದಾಗಿ ಸರ್ಕಾರ ಹೇಳಿತ್ತು. ಈ ಬಾರಿ ಖಾಸಗಿ ಏಜೆನ್ಸಿ ನಿಯೋಜಿಸದೇ ಇಲಾಖೆಯ ಸಿಬ್ಬಂದಿ ಬಳಕೆ ಜೊತೆ ಅಗತ್ಯವಾದರೆ ಪೂರಕವಾಗಿ ಗೃಹ ರಕ್ಷಕರನ್ನ ಬಳಸಿಕೊಂಡು ಟೊಯಿಂಗ್ ಅನುಷ್ಠಾನ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಆರಂಭಿಸುವುದಾಗಿ ಹೇಳಿತ್ತು.
ಬೇಕಿದೆ 3 ರಿಂದ 4 ಕೋಟಿ ರೂ ಅನುದಾನ : ಟೋಯಿಂಗ್ ಜಾರಿಯ ರೂಪುರೇಷೆಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಗೃಹ ಇಲಾಖೆಯು ನಿರಂತರ ಸಭೆಗಳನ್ನ ನಡೆಸಿ ಚರ್ಚೆ ನಡೆಸಿದರೂ ಇದುವರೆಗೂ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಮುಖ್ಯವಾಗಿ ನಗರದಲ್ಲಿ ಟೋಯಿಂಗ್ ಜಾರಿಗಾಗಿ ವಾಹನಗಳ ಖರೀದಿ, ಉಪಕರಣಗಳ ನಿರ್ವಹಣೆ, ಇಂಧನ ವೆಚ್ಚ, ಹೆಚ್ಚುವರಿಯಾಗಿ ಗೃಹ ರಕ್ಷಕರನ್ನ ನಿಯೋಜಿದರೆ ಅವರ ತರಬೇತಿ ವೆಚ್ಚ ಸೇರಿದಂತೆ ಸುಮಾರು 3ರಿಂದ 4 ಕೋಟಿ ರೂ. ಅನುದಾನದ ಅಗತ್ಯವಿದೆ. ಆದರೆ, ಈ ಹಣ ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..!


