BBMP
Loading ...

E Khata

ಇ-ಖಾತಾ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳ ಅಗತ್ಯವಿದೆ: ನೋಂದಾಯಿತ ಆಸ್ತಿ ಹಕ್ಕುಪತ್ರ, ಎಸ್‌ಎಎಸ್‌ ತೆರಿಗೆ ರಸೀದಿ, ಬೆಸ್ಕಾಂ ಮೀಟರ್ ಸಂಖ್ಯೆ , ಜಿಪಿಎಸ್ ಕೋಆರ್ಡಿನೇಟ್ಸ್, ಆಸ್ತಿಯ ಫೋಟೋ, ಆಧಾರ್ ಕಾರ್ಡ್ ಪ್ರತಿಗಳು, ಇಸಿ ಮತ್ತು ಹಳೆಯ ಖಾತಾ ಪ್ರಮಾಣಪತ್ರ.

ಈ ಮೇಳದಲ್ಲಿ ಜನರಿಗೆ ಯಾವುದೇ ಬದಲಿ ಶುಲ್ಕವಿಲ್ಲ. ಆದರೆ ಅರ್ಜಿ ಶುಲ್ಕ ₹125 ಮತ್ತು ಸೇವಾ ಶುಲ್ಕ ₹45 ವಿಧಿಸಲಾಗುತ್ತದೆ. ಹೆಚ್ಚುವರಿ ದಾಖಲೆ ಪೇಜ್ ಇದ್ದರೆ ಪ್ರತಿ ಪೇಜ್‌ಗೆ ₹5 ಹೆಚ್ಚುವರಿ ಶುಲ್ಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೆಲ ಅಧಿಕಾರಿಗಳು ಇ-ಖಾತಾ ಕೊಡಲು ಲಂಚ ಬೇಡಿಕೆ ಇಟ್ಟಿರುವ ಆರೋಪಗಳ ನಡುವೆ ಈ ರೀತಿಯ ನೇರ ಮೇಳಗಳ ಮೂಲಕ ಬಿಬಿಎಂಪಿ ಪರಿಶುದ್ಧ ಸೇವೆ ಒದಗಿಸಲು ಮುಂದಾಗಿದೆ.

ಇ-ಖಾತಾ ಇಲ್ಲದೆ ಇದ್ದರೆ ಆಸ್ತಿಯ ಖರೀದು, ಮಾರಾಟ ಅಥವಾ ಮೂಲಭೂತ ಸೌಲಭ್ಯಗಳು ಪಡೆಯಲು ತೊಂದರೆಯಾಗುವುದು ನಿಜ. ಈ ಹಿನ್ನೆಲೆಯಲ್ಲಿ ಈ ಮೇಳ ಜನಪರ ಸೇವೆಯ ಪ್ರಮುಖ ಹಂತವಾಗಿದೆ.

ಪ್ರಕ್ರಿಯೆ ಬಗ್ಗೆ ಗೊಂದಲವಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಾದರೆ ಬಿಬಿಎಂಪಿ ಹೆಲ್ಪ್‌ಲೈನ್ 080-22660000 ಕರೆ ಮಾಡಿ ಅಥವಾ BBMP ಕಚೇರಿ ಸಂಪರ್ಕಿಸಬಹುದು. ಆನ್‌ಲೈನ್ ಪೋರ್ಟಲ್ (online portal) ಮೂಲಕ ಸಾಧ್ಯವಿಲ್ಲದವರಿಗೆ ಈ ಮೇಳ ಮೂಲಕ ನೇರ ಸಹಾಯ ದೊರೆಯಲಿದೆ.

ನಾಳೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಇ-ಖಾತಾ ಮೇಳ ಆಯೋಜನೆ: ಬೇಕಾಗುವ ದಾಖಲೆಗಳೇನು?

Leave a Reply

Your email address will not be published. Required fields are marked *