BBMP
Loading ...

E khata

ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲಿದೆ. ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇದ್ದ ಇ-ಖಾತಾ ವಿತರಣೆ ಇನ್ಮುಂದೆ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್​ಲ್ಯಾನ್ ಮಾಡಿದ್ದು, ಇದೇ ಜುಲೈ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಇ-ಖಾತಾ ಸಿಗುವ ಸಾಧ್ಯತೆಗಳಿವೆ.

ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಆದ್ರೆ, ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಲಾಗಿದ್ದು, ಜುಲ್ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ನೋಂದಣಿಗೆ ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.

ಸದ್ಯ ಬೆಂಗಳೂರಲ್ಲಿ 50 ಲಕ್ಷ ಇ-ಖಾತಾ ನೋಂದಣಿಯಾಗಿದೆ . ಬ್ಯಾಟರಾಯನಪುರ ವ್ಯಾಪ್ತಿಯಲ್ಲೇ 50 ಸಾವಿರ ನೋಂದಣಿಯಾಗಿದೆ . ಇವತ್ತು ಜನರಿಗೆ ಮೇಳದ ಮೂಲಕ ಖಾತಾ ವಿತರಿಸ್ತಿದ್ದೇವೆ .ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಡಿಸಿಎಂ ಚಾಲನೆ ನೀಡುತ್ತಾರೆ. ಸದ್ಯ ಈಗಾಗಲೇ ಬೆಳಗ್ಗೆಯಿಂದ 2 ಸಾವಿರ ಜನರು ನೋಂದಣಿಗೆ ಬಂದಿದ್ದಾರೆ. ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲೂ ಮೇಳ ನಡೆಸಲು ಸರ್ಕಾರ ಚಿಂತಿಸಲಿದೆ . ಸದ್ಯ ಇದರಿಂದ ಜನರಿಗೆ ಸುಲಭವಾಗಿ ಇ-ಖಾತಾ ಪಡೆಯಲು ಸಹಾಯವಾಗುತ್ತೆ . ಇ-ಖಾತಾ ಇದ್ರೆ ನಿಮ್ಮ ಆಸ್ತಿಗೆ ಸುರಕ್ಷತೆ ಇರುತ್ತೆ ಎಂದರು.

ಇಂದು ಇ ಖಾತಾ ಮೇಳ: ಬೆಂಗಳೂರು ಆಸ್ತಿ ಮಾಲೀಕರೇ, ಈ ದಾಖಲೆಗಳು ಇದ್ರೆ ಸ್ಥಳದಲ್ಲೇ ಸಿಗುತ್ತೆ ಇ-ಖಾತಾ

Leave a Reply

Your email address will not be published. Required fields are marked *