ಬೆಂಗಳೂರು: ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ 3ಎ ಹಂತದ ಯೋಜನೆ ಗುಲಾಬಿ ಮಾರ್ಗ (ಪಿಂಕ್ ಲೈನ್) ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕೆಲಸಗಳು ದಿನೇದಿನೆ ಚುರುಕಾಗುತ್ತಿದೆ.
ಈ ಯೋಜನೆಗಾಗಿ ಭಾರತ್ ಅರ್ಥ್ ಮೂವರ್ಸ್ ನಿಯಮಿತ (ಬಿಇಎಂಎಲ್) ಸಂಸ್ಥೆ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) 3,177 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಆ ಪ್ರಕಾರ,
2026ರ ಮಾರ್ಚ್ ವೇಳೆಗೆ 6 ಬೋಗಿಗಳ ಚಾಲಕರಹಿತ 20 ರೈಲು ಸೆಟ್ಗಳನ್ನು ತಯಾರಿಸಿ ನೀಡಬೇಕಿದೆ. 10 ತಿಂಗಳೊಳಗಾಗಿ ಪಿಂಕ್ಲೈನ್ ಮೆಟ್ರೋ ಕಾರ್ಯåಚರಣೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ಗುಲಾಬಿ ಮಾರ್ಗ ಯೋಜನೆಯು ಸುಮಾರು 21.26 ಕಿ.ಮೀ. ಉದ್ದವಿದ್ದು, 18 ನಿಲ್ದಾಣಗಳನ್ನು ಒಳಗೊಂಡಿದೆ. ತಾವರೆಕೆರೆ, ಜಯದೇವ ಆಸ್ಪತ್ರೆ, ಡೇರಿ ಸರ್ಕಲ್, ಎಂ.ಜಿ. ರಸ್ತೆ, ಕಳೇನ ಅಗ್ರಹಾರ, ನಾಗವಾರ ಮುಂತಾದ ಪ್ರಮುಖ ಬಡಾವಣೆಗಳನ್ನು ಸಂರ್ಪಸುತ್ತದೆ. ಈ ಮಾರ್ಗದ ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಸಂಪೂರ್ಣವಾಗಿ ಸ್ವಯಂಚಾಲಿತ ತಂತ್ರಜ್ಞಾನದಿಂದ ಸಂಚರಿಸುವ ರೈಲುಗಳು ಇರಲಿದ್ದು, ಬೆಂಗಳೂರು ಹಾಗೂ ಭೋಪಾಲ್ನ ಬಿಇಎಂಎಲ್ ಘಟಕಗಳಲ್ಲಿ ಬೋಗಿಗಳು ತಯಾರಾಗಲಿವೆ ಎಂದು ಮೂಲಗಳು ತಿಳಿಸಿವೆ.
318 ಕೋಚ್ಗಳ ನಿರ್ಮಾಣ!
ನಿರ್ವಹಣಾ ಪರೀಕ್ಷೆಗಳಿಗೆ ಹಾಗೂ ಸುರಕ್ಷತಾ ಮೌಲ್ಯಮಾಪನಕ್ಕೆ 2025ರ ಆರಂಭದ ವೇಳೆಗೆ ಬಿಇಎಂಎಲ್ ತನ್ನ ಮೊದಲ ಮಾದರಿ ರೈಲು ಬೋಗಿಯನ್ನು ಹೊರತರುತ್ತದೆ. ಬಳಿಕ ಹಂತ ಹಂತವಾಗಿ 20 ಸೆಟ್ಗಳನ್ನು ತಯಾರಿಸಲಿದೆ. ಬಿಇಎಂಎಲ್ ಜತೆ 3,177 ಕೋಟಿ ರೂ. ಒಪ್ಪಂದ ಮಾಡುವ ಮೂಲಕ ಒಟ್ಟು 318 ಕೋಚ್ಗಳನ್ನು ನಿರ್ವಿುಸಲಿದೆ. ಅದರಲ್ಲಿ 96 ಕೋಚ್ಗಳು ಗುಲಾಬಿ ಮಾರ್ಗಕ್ಕೆ, 222 ನೀಲಿ ಮಾರ್ಗಕ್ಕೆ ತಯಾರಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಮಾಕ್ಷಿ ಪಾಳ್ಯದ ಶ್ರೀ ಶಿರಡಿ ಸಾಯಿ ರಿಲೀಜಿಯಸ್ ಟ್ರಸ್ಟ್ ವತಿಯಿಂದ ಅದ್ಧೂರಿಯಾಗಿ ಜರುಗಿದ 21ನೇ ವಾರ್ಷಿಕೋತ್ಸವ


