BBMP
Loading ...

Bengaluru Tour

ಬೆಂಗಳೂರು: ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಮತ್ತು ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್​ಗೆ ಒಂದು ದಿನದ ಪ್ರವಾಸದ ಪ್ಯಾಕೇಜ್ ಅ​ನ್ನು ಬಿಎಂಟಿಸಿ ಪರಿಚಯಿಸಿದೆ. ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ ಈ ಸೇವೆ ಲಭ್ಯ.

ಪ್ರವಾಸದ ಪ್ಯಾಕೇಜ್‌ಗೆ ‘ಬೆಂಗಳೂರು ಸುತ್ತೋಣ ಬನ್ನಿ’ ಎಂಬ ಘೋಷವಾಕ್ಯ ನೀಡಲಾಗಿದೆ. ಒಟ್ಟು 6 ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗೆ ಒಬ್ಬರಿಗೆ 600 ರೂಪಾಯಿ ದರ ನಿಗದಿ ಮಾಡಲಾಗಿದೆ.

ಬೆಳಗ್ಗೆ 9ಕ್ಕೆ ಬೆಂಗಳೂರಿನ ಮೆಜೆಸ್ಟಿಕ್​ನಿಂದ ಪ್ರವಾಸ ಆರಂಭವಾಗಲಿದ್ದು ದೊಡ್ಡಬಳ್ಳಾಪುರ ನಗರದ ನೇಲದಾಂಜನೇಯ ದೇವಸ್ಥಾನ, ಶ್ರೀಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಮುದ್ದೇನಹಳ್ಳಿಯ ಜ್ಞಾನೀತೀರ್ಥ ಲಿಂಗ, ಸ್ಕಂದಗಿರಿಯ ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ, ಕಲ್ಯಾಣಿ(ಕಾರಂಜಿ) ಮತ್ತು ಈಶಾ ಫೌಂಡೇಶನ್ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ರಾತ್ರಿ 7 ಗಂಟೆಗೆ ಮತ್ತೆ ಮೆಜೆಸ್ಟಿಕ್‌ನಲ್ಲಿ ಪ್ರವಾಸ ಮುಕ್ತಾಯವಾಗಲಿದೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080 22483777, 7760991212ಕ್ಕೆ ಸಂಪರ್ಕಿಸಬಹುದು.

ಮಳೆ, ಗಾಳಿಗೆ ಟೊಳ್ಳು ಮರಗಳ ಕೊಂಬೆಗಳ ಅಪಾಯ: ಪ್ರಾಣ ಕಸಿಯುವ ಮುನ್ನ ಎಚ್ಚೆತ್ತುಕೊಳ್ಳಲಿ ಬಿಬಿಎಂಪಿ

Leave a Reply

Your email address will not be published. Required fields are marked *