BBMP
Loading ...

Sai Baba

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ಕಾಲೋನಿಯ ಶ್ರೀ ಶಿರಡಿ ಸಾಯಿ ರಿಲೀಜಿಯಸ್ ಟ್ರಸ್ಟ್ (ರಿ.) ವತಿಯಿಂದ ಜೂನ್​ 21 ಮತ್ತು 22ರಂದು 21ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಜರುಗಲಿವೆ.

ಜೂನ್​ 21ರ ಶನಿವಾರದಂದು ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜೂನ್​ 22ರ ಭಾನುವಾರದಂದು ಬೆಳಗ್ಗೆ 05.15 ಕ್ಕೆ ಕಾಕಡ ಆರತಿ, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಪುಣ್ಯಾಹ, ನಾಂದಿ, ನವಗ್ರಹ ಶಾಂತಿ ಕ್ಷೇತ್ರಪಾಲಕ ಬಲಿ, ಕಲಶಸ್ಥಾಪನೆ & ಆವಾಹನಾ ಪೂಜಾ, ಗಣಹೋಮ, ಶ್ರೀ ಶಿರಡಿ ಸಾಯಿಹೋಮ ಪೂರ್ಣಾಹುತಿ, ಕಲಶೋದಕಾಭಿಷೇಕ ಹಾಗೂ ಪುಷ್ಪಾಭಿಷೇಕ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಮಹಾಮಂಗಳಾರತಿ, ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಅನ್ನದಾನ, ಸಂಜೆ 3 ಗಂಟೆಯಿಂದ 5 ಗಂಟೆಯವರೆಗೆ ಸತ್ಸಂಗ, ಭಜನೆ ಹಾಗು ಸಾಯಿನಾಮಜಪ, ಸಂಜೆ 5.15 ರಿಂದ 6.05ರವರೆಗೆ ಧೂಪಾರತಿ, ಸಂಜೆ 6 ರಿಂದ 7.45ರವರೆಗೆ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ರಾತ್ರಿ 8 ಗಂಟೆಗೆ ಶೇಜಾರತಿ ನಡೆಯಲಿದೆ.

ಸೇವಾ ವಿವರ
ಹೋಮ ಸೇವೆ- 151 ರೂಪಾಯಿ
ಕಲಶೋದಕಾಭಿಷೇಕ ಸೇವೆ- 351 ರೂಪಾಯಿ
(1251 ಕಲಶಗಳಿಗೆ ಮಾತ್ರ ಸೀಮಿತ)
ಅನ್ನದಾನ ಸೇವೆಗೆ ತಮ್ಮ ಇಚ್ಛಾನುಸಾರ ಕಾಣಿಕೆ ನೀಡಬಹುದು (ರೂ. 500/- ಮೇಲ್ಪಟ್ಟು)
ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕಾಗಿ ಸಾಯಿಮಂದಿರ ಆಡಳಿತ ಮಂಡಳಿ ವಿನಂತಿಸಿದೆ.

ಇನ್ನಿತರ ಕಾರ್ಯಕ್ರಮಗಳು
ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟಿನ ಶ್ರೀ ಶಿರಡಿ ಸಾಯಿ ಸಾಂಸ್ಕೃತಿಕ ಕೇಂದ್ರದಿಂದ ಜೂನ್​ 22ರಂದು ಈ ಕೆಳಗಿನ ಚಟುವಟಿಕೆಗಳು ಸಹ ಇರಲಿವೆ.
* ಉಚಿತ ವೈದ್ಯಕೀಯ ಸಮಾಲೋಚನೆ
* ನಿಯಮಿತ ಉಚಿತ ವೈದ್ಯಕೀಯ ಶಿಬಿರ
* ನಿಯಮಿತ ರಕ್ತದಾನ ಶಿಬಿರ
* ಸಾಯಿ ವಿದ್ಯಾ ನಿಧಿ – ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
* ಉಚಿತ ಕಣ್ಣಿನ ತಪಾಸಣಾ ಶಿಬಿರ
* ಬಿಪಿಎಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
* ದೃಷ್ಟಿ ವಿಕಲಚೇತನರಿಗೆ ಬ್ರೈಲ್ ಪುಸ್ತಕಗಳು
* ಜ್ಞಾನಜ್ಯೋತಿ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಸಹಾಯದಿಂದ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಪೋಷಕತ್ವ
* ಉಚಿತ ಪತಂಜಲಿ ಯೋಗ ತರಗತಿಗಳು

ಸ್ಥಳ: ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎದುರು, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560079
ದೂರವಾಣಿ ಸಂಖ್ಯೆ: 080-23580404 ಇ-ಮೇಲ್-sbcssscharitabletrust@gmail.com
ಬ್ಯಾಂಕ್ ಕಾಲೋನಿಗೆ ದೇಣಿಗೆ: ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟ್
ವಿವರಗಳಿಗೆ ಸಂಪರ್ಕಿಸಿ:
ಪಿ.ವಿ. ಮಲ್ಯ:– 98449 03191
ಆರ್. ಕುಪ್ಪುಸ್ವಾಮಿ: 98867 00712
ಎಚ್.ಆರ್. ಪೈ:- 98450 98824

ಕಾಳಸಂತೆಯಲ್ಲಿ ಐಪಿಎಲ್‌ ಟಿಕೆಟ್‌ ಮಾರಾಟ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

Leave a Reply

Your email address will not be published. Required fields are marked *