ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ಕಾಲೋನಿಯ ಶ್ರೀ ಶಿರಡಿ ಸಾಯಿ ರಿಲೀಜಿಯಸ್ ಟ್ರಸ್ಟ್ (ರಿ.) ವತಿಯಿಂದ ಜೂನ್ 21 ಮತ್ತು 22ರಂದು 21ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಜರುಗಲಿವೆ.
ಜೂನ್ 21ರ ಶನಿವಾರದಂದು ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜೂನ್ 22ರ ಭಾನುವಾರದಂದು ಬೆಳಗ್ಗೆ 05.15 ಕ್ಕೆ ಕಾಕಡ ಆರತಿ, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಪುಣ್ಯಾಹ, ನಾಂದಿ, ನವಗ್ರಹ ಶಾಂತಿ ಕ್ಷೇತ್ರಪಾಲಕ ಬಲಿ, ಕಲಶಸ್ಥಾಪನೆ & ಆವಾಹನಾ ಪೂಜಾ, ಗಣಹೋಮ, ಶ್ರೀ ಶಿರಡಿ ಸಾಯಿಹೋಮ ಪೂರ್ಣಾಹುತಿ, ಕಲಶೋದಕಾಭಿಷೇಕ ಹಾಗೂ ಪುಷ್ಪಾಭಿಷೇಕ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಮಹಾಮಂಗಳಾರತಿ, ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಮಹಾಮಂಗಳಾರತಿ, ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಅನ್ನದಾನ, ಸಂಜೆ 3 ಗಂಟೆಯಿಂದ 5 ಗಂಟೆಯವರೆಗೆ ಸತ್ಸಂಗ, ಭಜನೆ ಹಾಗು ಸಾಯಿನಾಮಜಪ, ಸಂಜೆ 5.15 ರಿಂದ 6.05ರವರೆಗೆ ಧೂಪಾರತಿ, ಸಂಜೆ 6 ರಿಂದ 7.45ರವರೆಗೆ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಹಾಗೂ ರಾತ್ರಿ 8 ಗಂಟೆಗೆ ಶೇಜಾರತಿ ನಡೆಯಲಿದೆ.
ಸೇವಾ ವಿವರ
ಹೋಮ ಸೇವೆ- 151 ರೂಪಾಯಿ
ಕಲಶೋದಕಾಭಿಷೇಕ ಸೇವೆ- 351 ರೂಪಾಯಿ
(1251 ಕಲಶಗಳಿಗೆ ಮಾತ್ರ ಸೀಮಿತ)
ಅನ್ನದಾನ ಸೇವೆಗೆ ತಮ್ಮ ಇಚ್ಛಾನುಸಾರ ಕಾಣಿಕೆ ನೀಡಬಹುದು (ರೂ. 500/- ಮೇಲ್ಪಟ್ಟು)
ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕಾಗಿ ಸಾಯಿಮಂದಿರ ಆಡಳಿತ ಮಂಡಳಿ ವಿನಂತಿಸಿದೆ.
ಇನ್ನಿತರ ಕಾರ್ಯಕ್ರಮಗಳು
ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟಿನ ಶ್ರೀ ಶಿರಡಿ ಸಾಯಿ ಸಾಂಸ್ಕೃತಿಕ ಕೇಂದ್ರದಿಂದ ಜೂನ್ 22ರಂದು ಈ ಕೆಳಗಿನ ಚಟುವಟಿಕೆಗಳು ಸಹ ಇರಲಿವೆ.
* ಉಚಿತ ವೈದ್ಯಕೀಯ ಸಮಾಲೋಚನೆ
* ನಿಯಮಿತ ಉಚಿತ ವೈದ್ಯಕೀಯ ಶಿಬಿರ
* ನಿಯಮಿತ ರಕ್ತದಾನ ಶಿಬಿರ
* ಸಾಯಿ ವಿದ್ಯಾ ನಿಧಿ – ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
* ಉಚಿತ ಕಣ್ಣಿನ ತಪಾಸಣಾ ಶಿಬಿರ
* ಬಿಪಿಎಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
* ದೃಷ್ಟಿ ವಿಕಲಚೇತನರಿಗೆ ಬ್ರೈಲ್ ಪುಸ್ತಕಗಳು
* ಜ್ಞಾನಜ್ಯೋತಿ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಸಹಾಯದಿಂದ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಪೋಷಕತ್ವ
* ಉಚಿತ ಪತಂಜಲಿ ಯೋಗ ತರಗತಿಗಳು
ಸ್ಥಳ: ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎದುರು, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು-560079
ದೂರವಾಣಿ ಸಂಖ್ಯೆ: 080-23580404 ಇ-ಮೇಲ್-sbcssscharitabletrust@gmail.com
ಬ್ಯಾಂಕ್ ಕಾಲೋನಿಗೆ ದೇಣಿಗೆ: ಶ್ರೀ ಶಿರಡಿ ಸಾಯಿ ಚಾರಿಟೇಬಲ್ ಟ್ರಸ್ಟ್
ವಿವರಗಳಿಗೆ ಸಂಪರ್ಕಿಸಿ:
ಪಿ.ವಿ. ಮಲ್ಯ:– 98449 03191
ಆರ್. ಕುಪ್ಪುಸ್ವಾಮಿ: 98867 00712
ಎಚ್.ಆರ್. ಪೈ:- 98450 98824


ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ: ಇಬ್ಬರು ಕಾನ್ಸ್ಟೆಬಲ್ಗಳ ಅಮಾನತು


