BBMP
Loading ...

Car Rain

ಬೆಂಗಳೂರು: ಮಳೆ ನೀರನ್ನು ಕಾರಿನ ಮೇಲೆ ಹಾರಿಸಿದ್ದಕ್ಕೆ ಮಾಲೀಕನೊಬ್ಬ ಕಾರು ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ನಗರದ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನಡೆದಿದೆ.

ಗಾಯಾಳುವನ್ನು ಜಯಂತ್ ಎಂದು ಗುರುತಿಸಲಾಗಿದೆ. ಮೇ 25ರಂದು ಜಯಂತ್ ದಂಪತಿ ಮೆಜೆಸ್ಟಿಕ್‌ನಿಂದ ಲುಲು ಮಾಲ್ ಕಡೆ ತೆರಳುತ್ತಿದ್ದರು. ಈ ವೇಳೆ ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ನೀರು ಪಕ್ಕದ ಕಾರಿಗೆ ತಾಗಿದೆ. ಇದನ್ನು ಕಂಡ ಮಾಲೀಕ ಕೂಡಲೇ ಕಾರನ್ನು ಅಡ್ಡ ಹಾಕಿ, ಜಯಂತ್‌ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಕೊನೆಗೆ ಜಯಂತ್ ಆತನಿಗೆ ಕ್ಷಮೆ ಕೇಳಿ ಮುಂದೆ ಹೋಗಿದ್ದಾರೆ.

ಆದರೂ ಬಿಡದೇ ಕಾರು ಮಾಲೀಕ ಮೆಜೆಸ್ಟಿಕ್ ಅಂಡರ್‌ಪಾಸ್‌ನಿಂದ ಲುಲು ಮಾಲ್ ಅಂಡರ್‌ಪಾಸ್‌ವರೆಗೂ ಹಿಂಬಾಲಿಸಿಕೊಂಡು ಜಯಂತ್ ಕಾರನ್ನು ಅಡ್ಡಗಟ್ಟಿದ್ದಾರೆ. KA02 MT0512 ಕಾರಿನಿಂದ ಕೆಳಗಿಳಿದು ಕಾರ್‌ನಲ್ಲಿದ್ದ ಜಯಂತ್‌ರನ್ನು ಎಳೆದುಕೊಂಡು ಹಲ್ಲೆ ನಡೆಸಿ, ಮುಖಕ್ಕೆ ಗುದ್ದಿ ರೌಡಿಸಂ ನಡೆಸಿದ್ದಾರೆ. ಜೊತೆಗೆ ಅವರ ಬಲಗೈ ಬೆರಳನ್ನು ಮಾಂಸ ಬರುವಂತೆ ಕಚ್ಚಿ, ವಿಕೃತಿ ಮೆರೆದಿದ್ದಾರೆ.

ಜಯಂತ್ ಕೈಬೆರಳಿಗೆ ಸರ್ಜರಿ ಮಾಡಿದ ವೈದ್ಯರು ಐದು ಸ್ಟಿಚ್ ಹಾಕಿ, 6 ತಿಂಗಳು ರೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ. ತನ್ನದಲ್ಲದ ತಪ್ಪಿಗೆ ಜಯಂತ್ 2 ಲಕ್ಷ ರೂ. ಬಿಲ್ ಕಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಮಾಗಡಿ ರೋಡ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿ; 75 ಪ್ರಮುಖ ಜಂಕ್ಷನ್‌ ಗಳಲ್ಲಿ ಟೋಯಿಂಗ್‌

Leave a Reply

Your email address will not be published. Required fields are marked *