ಬೆಂಗಳೂರು: ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಬೆಂಗಳೂರು ನಗರದಲ್ಲಿ ಮತ್ತೆ ಟೋಯಿಂಗ್ ಶುರುವಾಗಲಿದೆ. ಇನ್ಮುಂದೆ ರೋಡ್ ರೋಡ್ನಲ್ಲಿ ವೆಹಿಕಲ್ ಪಾರ್ಕ್ ಮಾಡಿದ್ರೆ ಟ್ರಾಫಿಕ್ ಪೊಲೀಸರು ಎತ್ಹಾಕೊಂಡು ಹೋಗ್ತಾ ಇರ್ತಾರೆ.
ಹಲವು ದಿನಗಳಿಂದ ನಿಂತಿದ್ದ ಟೋಯಿಂಗ್ ರೂಲ್ಸ್ ಅನ್ನ ಮತ್ತೆ ಆರಂಭಿಸಲು ಪೊಲೀಸರು ಸಜ್ಜಾಗಿದ್ದಾರೆ. ಇನ್ಮುಂದೆ ಎಲ್ಲೆಲ್ಲೆಂದ್ರಲ್ಲಿ ಗಾಡಿ ನಿಂತಿದ್ದರೆ ಎತ್ತಂಗಡಿ ಫಿಕ್ಸ್.
ಇತ್ತೀಚೆಗೆ ಬೆಂಗಳೂರು ಉಸ್ತುವಾರಿ ಸಚಿವ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಗರದಲ್ಲಿ 21 ದಿನ ವಾಹನಗಳನ್ನು ಒಂದೇ ಕಡೆ ಪಾರ್ಕ್ ಮಾಡಿದ್ರೆ ಹರಾಜು ಮಾಡುತ್ತೇವೆ ಎಂದಿದ್ದರು. ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಂದಲೂ ಟೋಯಿಂಗ್ ಜಾರಿಗೆ ತರುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆ ಬಳಿಕ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು, ಬೆಂಗಳೂರು ನಗರದಲ್ಲಿ ಟೋಯಿಂಗ್ ಅನ್ನು ಹಿಂದೆ ನಿಲ್ಲಿಸಿದ್ದೇವು. ಅದನ್ನ ರೀ ಇಂಟ್ರಡ್ಯೂಸ್ ಮಾಡ್ತೀವಿ.
ಈ ಹಿಂದೆ ಟೋಯಿಂಗ್‌ಗೆ ಬಾಡಿಗೆ ವಾಹನಗಳನ್ನು ತೆಗೆದುಕೊಳುತ್ತಾ ಇದ್ವಿ. ಈಗ ನಮ್ಮದೆ ವೆಹಿಕಲ್, ನಮ್ಮದೇ ಸಿಬ್ಬಂದಿಗಳಿಂದ ಅದನ್ನ ಹ್ಯಾಂಡಲ್ ಮಾಡ್ತೀವಿ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಕನ್ನಡ ತಮಿಳಿನಿಂದ ಬಂದಿಲ್ಲ.. ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಆಕ್ರೋಶ!


