BBMP
Loading ...

BBMP Commissioner

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ತುಷಾರ್‌ ಗಿರಿನಾಥ್‌ ಅವರು ಆಡಳಿತಾಧಿಕಾರಿಯಾಗಿ ಹಾಗೂ ಮುಖ್ಯ ಆಯುಕ್ತರಾಗಿ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಎಸ್‌.ಆರ್‌. ಉಮಾಶಂಕರ್ ಅವರು ಏಪ್ರಿಲ್‌ 30ರಂದು ನಿವೃತ್ತರಾಗಿದ್ದು, ಅವರಿಂದ ತುಷಾರ್‌ ಗಿರಿನಾಥ್‌ ಅಧಿಕಾರ ಸ್ವೀಕರಿಸಿದರು. ಬೆಳ್ಳಿಯ ಬೀಗದ ಕೀ ಹಾಗೂ ಕೆಎಂಸಿ ಕಾಯ್ದೆಗಳನ್ನು ಹಸ್ತಾಂತರಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಎಸ್‌.ಆರ್‌. ಉಮಾಶಂಕರ್ ಅವರು ಏಪ್ರಿಲ್‌ 30ರಂದು ನಿವೃತ್ತರಾಗಿದ್ದು, ಅವರಿಂದ ತುಷಾರ್‌ ಗಿರಿನಾಥ್‌ ಅಧಿಕಾರ ಸ್ವೀಕರಿಸಿದರು. ಬೆಳ್ಳಿಯ ಬೀಗದ ಕೀ ಹಾಗೂ ಕೆಎಂಸಿ ಕಾಯ್ದೆಗಳನ್ನು ಹಸ್ತಾಂತರಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಎಂ. ಮಹೇಶ್ವರ ರಾವ್‌ ಅವರು 2018ರ ಮೇ 3ರಿಂದ ಜೂನ್‌ 29ರವರೆಗೆ ಬಿಬಿಎಂಪಿ ಆಯುಕ್ತರಾಗಿದ್ದರು. ಇದೀಗ ಮುಖ್ಯ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಪಾಲಿಕೆ, ಮಹಾನಗರ ಪಾಲಿಕೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈವರೆಗೆ ವಿವಿಧ ಅವಧಿಯಲ್ಲಿ 29 ಅಧಿಕಾರಿಗಳು ಆಡಳಿತಾಧಿಕಾರಿಗಳಾಗಿದ್ದರು. ತುಷಾರ್‌ ಗಿರಿನಾಥ್‌ ಅವರು 30ನೇ ಆಡಳಿತಾಧಿಕಾರಿಯಾಗಿದ್ದಾರೆ. ಅದೇ ರೀತಿ, ವಿವಿಧ ಅವಧಿಗಳಲ್ಲಿ 66 ಆಯುಕ್ತರಿದ್ದರು. 2021ರಲ್ಲಿ ಗೌರವ ಗುಪ್ತ ಅವರು ಪ್ರಥಮ ಮುಖ್ಯ ಆಯುಕ್ತರಾಗಿದ್ದರು. 2022ರ ಮೇ 6ರಿಂದ ತುಷಾರ್‌ ಗಿರಿನಾಥ್‌ ಮುಖ್ಯ ಆಯುಕ್ತರಾಗಿದ್ದರು. ಮಹೇಶ್ವರ ರಾವ್‌ ಅವರು ಬಿಬಿಎಂಪಿಯ ಮೂರನೇ ಮುಖ್ಯ ಆಯುಕ್ತರಾಗಿದ್ದಾರೆ.

ತೃಪ್ತಿ ತಂದಿಲ್ಲ‌: ತುಷಾರ್‌ ಗಿರಿನಾಥ್‌
‘ಮೂರು ವರ್ಷದ ದೀರ್ಘ ಅವಧಿಗೆ ಬಿಬಿಎಂಪಿ ಮುಖ್ಯ ಆಯುಕ್ತನಾಗಿ ಕಾರ್ಯನಿರ್ವಹಿಸಿದ್ದೇನೆ. ಎಲ್ಲವನ್ನೂ ಮಾಡಿದ್ದೇನೆ ಎಂಬ ತೃಪ್ತಿ ಇಲ್ಲ. ಆಡಳಿತ ಅಥವಾ ಸರ್ಕಾರ ಎಂಬುದು ನಿರಂತರ ಪ್ರಕ್ರಿಯೆ. ಯಾವ ಸಂದರ್ಭದಲ್ಲೂ ಎಲ್ಲವೂ ಮುಗಿಯುವುದಿಲ್ಲ. ಯಾವಾಗ ಯಾವ ಹುದ್ದೆಯನ್ನು ಬಿಡುವಾಗ ಸಾಕಷ್ಟು ಕೆಲಸ ಮಾಡಿದ್ದರೂ ಇನ್ನೂ ಕೆಲಸ ಮಾಡಬೇಕಿತ್ತು ಎನಿಸುತ್ತದೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು. ‘ಮಹಾನಗರ ಪಾಲಿಕೆ ಇರುವುದರಿಂದ ಜನನದಿಂದ ಮರಣದವರೆಗೂ ಹಲವು ಚಟುವಟಿಕೆಗಳಿರುವುದರಿಂದ ತಪ್ಪುಗಳು ಆಗುತ್ತಾ ಇರುತ್ತವೆ. ತಪ್ಪಾಗಿರುವುದಕ್ಕೆ ಮಹಾನಗರದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಮಿತ್ರ ಮಹೇಶ್ವರ ರಾವ್‌ ಅವರು ಅತಿ ಸಕ್ರಿಯವಾಗಿ ಕೆಲಸ ಮಾಡುವ ಅಧಿಕಾರಿ. ಅವರು ಕ್ರೀಡಾಪಟುವೂ ಆಗಿದ್ದು ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡುತ್ತಾರೆ. ಅವರಿಗೆ ಎಲ್ಲರೂ ಸಹಕಾರ ನೀಡಲಿ. 12– 13 ಐಎಎಸ್‌ ಅಧಿಕಾರಿಗಳು ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿರುವುದು ಅಭೂತಪೂರ್ವ ಕಾರ್ಯ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದರು

ನಗರ ಬದಲಾಗಿದೆ: ಮಹೇಶ್ವರ ರಾವ್‌
‘15 ವರ್ಷದ ಹಿಂದೆ ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತನಾಗಿ ಕೆಲಸ ಮಾಡಿದ್ದೇನೆ. ಅಂದಿಗಿಂತ ಇಂದಿಗೆ ನಗರ ಬಹಳಷ್ಟು ಬದಲಾಗಿದೆ. ತುಷಾರ್‌ ಗಿರಿನಾಥ್‌ ಅವರಿಗೆ ಬಿಬಿಎಂಪಿ ಬಗ್ಗೆ ಮೂರು ವರ್ಷದ ಅಪಾರ ಅನುಭವವಿದೆ. ಅವರು ಆಡಳಿತಾಧಿಕಾರಿಯಾಗಿದ್ದು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ’ ಎಂದು ಎಂ. ಮಹೇಶ್ವರ ರಾವ್‌ ಹೇಳಿದರು. ‘ಬ್ರ್ಯಾಂಡ್‌ ಬೆಂಗಳೂರು ಸೇರಿದಂತೆ ಹಲವು ಕೆಲಸಗಳನ್ನು ಮಾಡಿದ್ದಾರೆ. ಅವರು ಸಾಕಷ್ಟು ಉಳಿದಿದೆ ಎಂದು ಹೇಳಿದ್ದಾರೆ ಅದನ್ನು ಪೂರ್ಣಗೊಳಿಸಲು ನಾನು ಕ್ರಮ ಕೈಗೊಳ್ಳುತ್ತೇನೆ. ಮಳೆಗಾಲದ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತೇನೆ. ಮಳೆಗಾಲದಲ್ಲಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅವುಗಳ ಬಗ್ಗೆ ಸಾಕಷ್ಟು ಕ್ರಮವಾಗಿ ಇನ್ನೂ ಕೆಲವು ಕಡೆ ಆಗಿಲ್ಲ. ಆ ಬಗ್ಗೆ ನಿಗಾವಹಿಸಲಾಗುವುದು’ ಎಂದು ಹೇಳಿದರು.

ಬಿಬಿಎಂಪಿ ಖಾತಾ ನಿಮ್ಮ ಹೆಸರಿಗೆ ವರ್ಗಾಯಿಸುವುದು ಹೇಗೆ? ಏನೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply

Your email address will not be published. Required fields are marked *